ರಾಮನಗರ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪ್ರತಿಭಟನೆ ನಡೆಸಿ, ಸಮಾಜದಲ್ಲಿ ಆತಂತಕದ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ಇಂದಲ್ಲ ನಾಳೆ ಕಾಂಗ್ರೆಸ್‍ನವರಿಗೆ ಪೌರತ್ವ ವಿರೋಧಿ ಹೋರಾಟವೇ ಬಗನಿ ಗೂಟವಾಗುತ್ತೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಕನಕಪುರ ತಾಲೂಕಿನ ತಮ್ಮ ಹುಟ್ಟೂರು ಯಲವನಾಥ ಗ್ರಾಮದಲ್ಲಿ ಸಚಿವರು ತಂದೆ-ತಾಯಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಕುಟುಂಬದ ಜೊತೆ ಭಾಗಿಯಾಗಿ ಪೂರ್ವಿಕರಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, 1993ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರೇ ಪೌರತ್ವ ಕಾಯ್ದೆ ತಿದ್ದುಪಡಿಯ ಬಗ್ಗೆ ಮಸೂದೆ ತರಲು ಮುಂದಾಗಿದ್ದರು. ಮಸೂದೆ ಬಗ್ಗೆ ಅವತ್ತೆ ಅವರು ಯೋಚನೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡೆ ಮಸೂದೆಯನ್ನು ಸಂಸತ್‍ನಲ್ಲಿ ಮಂಡಿಸಿ, ಕಾಯ್ದೆಯನ್ನು ಜಾರಿಗೆ ತಂದಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಜನರನ್ನು ಹುರಿದುಂಬಿಸಿ ತಪ್ಪು ದಾರಿಗೆ ಎಳೆದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ಸಿಗರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
Advertisement
Advertisement
ಪೌರತ್ವ ತಿದ್ದುಪಡೆ ಕಾಯ್ದೆಯಲ್ಲಿ ಯಾರನ್ನಾದರೂ ದೇಶ ಬಿಟ್ಟು ಹೋಗಿ ಎಂದು ಹೇಳಿದ್ದಾರಾ? ಅಲ್ಪಸಂಖ್ಯಾತರಿಗೆ ಹೊರ ದೇಶದಲ್ಲಿ ಇರಲು ಅವಕಾಶ ಕೊಡುತ್ತಿಲ್ಲ. ಅವರನ್ನ ಅಲ್ಲಿಂದ ಓಡಿಸುತ್ತಿದ್ದಾರೆ. ಅವರು ಎಲ್ಲಿರಬೇಕು? ಅವರ ದೇಶ ಯಾವುದು? ಹೀಗೆ ವಾಪಸ್ ಬರುವವರಿಗೆ ಹಕ್ಕು ಕೊಡುತ್ತೇವೆ ಅಂದ್ರೆ ನಿಮಗೇನು ಅನಾನುಕೂಲವಾಗಿದೆ. ಕಾನೂನನ್ನು ಅರ್ಥೈಸಿಕೊಳ್ಳದೇ ದೇಶದ ಇತಿಹಾಸವನ್ನು ತಿರುಚುವುದು ಸಮಂಜಸವಲ್ಲ ಎಂದು ಹೇಳಿದರು.
Advertisement
ನಾವು ಭಾರತೀಯ ಮುಸ್ಲಿಮರಿಗೆ ಬೇರೆ ಕಡೆಗೆ ಕಳಿಸುತ್ತೇವೆ ಅಂತ ಹೇಳಿಲ್ಲ. ಅವರಿಗೆ ಸಣ್ಣ ಅಪಚಾರವಾಗದಂತೆ ನೋಡಿಕೊಂಡಿದ್ದೇವೆ. ಆದರೆ ಕೆಲವರು ಬೀದಿಗಿಳಿದು ರಾಷ್ಟ್ರದ ಸಂಪತ್ತನ್ನು ಹಾಳು ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ರೀತಿ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗಿ ಪ್ರತಿಭಟನಾಕಾರರು ಏನೆಲ್ಲ ಮಾಡಿದ್ದಾರೆ. ಯಾರ ಮೇಲೆ, ಯಾವುದಕ್ಕಾಗಿ ಈ ದೌರ್ಜನ್ಯ ಎಂದು ಪ್ರಶ್ನಿಸಿದರು.