ಬೆಂಗಳೂರು: ವಿಲ್ಸನ್ ಗಾರ್ಡನ್ ನಾಗ (Wilson Garden Naga) ಯಾರು ಅಂತಾನೇ ನಮಗೆ ಗೊತ್ತಿಲ್ಲ. ನಾನು ಅವನನ್ನು ಭೇಟಿ ಆಗಿಲ್ಲ ಅಂತ ವಸತಿ ಸಚಿವ ಸೋಮಣ್ಣ (V.Somanna) ಸ್ಪಷ್ಟಪಡಿಸಿದ್ದಾರೆ.
ನಿನ್ನೆ ರಾತ್ರಿ ಸಚಿವ ಸೋಮಣ್ಣರನ್ನು ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಭೇಟಿ ಮಾಡಿದ್ದ ಎಂಬ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ನನಗೆ ವಿಲ್ಸನ್ ಗಾರ್ಡನ್ ನಾಗ ಯಾರು ಅಂತ ಗೊತ್ತೇ ಇಲ್ಲ. ನಾನು ನಾಗನನ್ನು ಭೇಟಿಯಾಗಿಲ್ಲ. ಒಂದೇ ಒಂದೂ ನಿಮಿಷವೂ ನಾನು ಅವನನ್ನು ನೋಡಿಲ್ಲ. ನಿತ್ಯ ಸಾವಿರಾರು ಜನರು ನನ್ನ ಭೇಟಿಗೆ ಬರುತ್ತಾರೆ. ನಾಗ ಯಾರು, ತಿಮ್ಮ ಯಾರು ಬೊಮ್ಮಾ ಯಾರು ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ, ಪ್ರೋತ್ಸಾಹ ನೀಡಿಲ್ಲ: ಬೊಮ್ಮಾಯಿ
ನನ್ನ ಜೀವನ ತೆರದ ಪುಸ್ತಕ. ನಾನು ಯಾವತ್ತು ಬೇರೆ ಕೆಲಸಗಳನ್ನು ಮಾಡಿಲ್ಲ. 55 ವರ್ಷಗಳಿಂದ ನಾನು ರಾಜಕೀಯ ಮಾಡ್ತಿದ್ದೇನೆ. 11 ಚುನಾವಣೆ ಎದುರಿಸಿದ್ದೇನೆ. ಯಾರು ಬರುತ್ತಾರೆ ಯಾರು ಹೋಗುತ್ತಾರೆ ನನಗೆ ಗೊತ್ತಿರಲ್ಲ. ಉತ್ತಮವಾಗಿ ಜೀವನ ಮಾಡಿಕೊಂಡು ಬಂದಿದ್ದೇನೆ. ನನ್ನ ವಯಸ್ಸಿಗೆ ಬೆಲೆ ಕೊಡಬೇಕು. ಹೀಗೆಲ್ಲ ಮಾಡಿದ್ರೆ ಮಾನಸಿಕವಾಗಿ ನನಗೆ ನೋವಾಗುತ್ತೆ. ಯಾವುದೇ ವ್ಯವಹಾರ ನನಗೆ ವಿಲ್ಸನ್ ಗಾರ್ಡನ್ ನಾಗನ ಜೊತೆ ಇಲ್ಲ. ನಾನು ಅವರನ್ನು ನೋಡಿಯೂ ಇಲ್ಲ. ಮಾತು ಆಡಿಸಿಲ್ಲ. ವಿಲ್ಸನ್ ಗಾರ್ಡನ್ ನಾಗ ಯಾರು ಅಂತಾನೂ ನನಗೆ ಗೊತ್ತಿಲ್ಲ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ