ಹಾವೇರಿ: ಜಿಲ್ಲೆಯ ಹಾವೇರಿ ತಾಲೂಕಿನ ನೆಲೋಗಲ್ಲ ಸರ್ಕಾರಿ ಪ್ರೌಢ ಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದರು.
ಶಾಲೆಗೆ ನೀಡಿದ ವೇಳೆ 10ನೇ ತರಗತಿ ಕೊಠಡಿಗೆ ಹೋದ ಸುರೇಶ್ ಕುಮಾರ್ ಅವರು, ಮಕ್ಕಳ ಆಸನದಲ್ಲಿ ಕುಳಿತು ಮಕ್ಕಳಿಂದ ಗಣಿತ ಪಾಠ ಆಲಿಸಿದರು. ನಂತರ ಮಕ್ಕಳೊಂದಿಗೆ ಕೆಲ ಹೊತ್ತು ಚರ್ಚೆ, ಸಂವಾದ ನಡೆಸಿದ ಅವರು, ನಿಮ್ಮ ಮನೆಯಲ್ಲಿ ವಿದ್ಯುತ್ ಸಮಸ್ಯೆ ಇದೇಯಾ, ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯ ಕಷ್ಟವಾಗಿದೇಯಾ, ಸಮಸ್ಯೆ ಇದ್ದರೆ ತಿಳಿಸಿ ನಿಮಗೆ ಶಾಲೆಯಲ್ಲಿ ಎಲ್ಲ ಸೌಲಭ್ಯ ಒದಗಿಸಿಕೊಡುತ್ತೇವೆ ಎಂದರು. ಇದನ್ನೂ ಓದಿ: ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನಿಗೆ ಸುರೇಶ್ ಕುಮಾರ್ ಸನ್ಮಾನ
Advertisement
Advertisement
ಅಲ್ಲದೆ ಮಕ್ಕಳು ಪರೀಕ್ಷೆಗೆ ಹೆದರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಮಕ್ಕಳ ಶಿಕ್ಷಣದ ಕುರಿತು ಶಿಕ್ಷಕರು ಕೈಗೊಂಡ ಕ್ರಮಗಳ ಕುರಿತು ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ನೈಜ್ಯ ಕತೆ ಹೇಳುವ ಮೂಲಕ ಮಕ್ಕಳಿಗೆ ಶಿಕ್ಷಣದ ಕುರಿತು ಪ್ರೇರಣೆ, ಉತ್ಸಾಹ, ಆಸಕ್ತಿ ತುಂಬಿದರು. ಇಲ್ಲಿನ ಹುಡಗಿ- ಹುಡಗ ಐಎಎಸ್, ಐಪಿಎಸ್ ಅಧಿಕಾಯಾಗಲಿ ಎಂದರು.