– ಟ್ವೀಟ್ ಮಾಡಿ ಸಲಹೆ ನೀಡಿದ ಸುರೇಶ್‍ಕುಮಾರ್
ಬೆಂಗಳೂರು: ನಾಳೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭ. ನಾಳೆಯಿಂದ ಮಾರ್ಚ್ 22ರ ವರೆಗೂ ಪರೀಕ್ಷೆಗಳು ನಡೆಯಲಿವೆ.
ಈಗಾಗಲೇ ಪಿಯು ಬೋರ್ಡ್ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಪೂರ್ವ ಭಾವಿಯಾಗಿ ಕಾರ್ಯಗಾರಗಳನ್ನ ಮಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಹಲವಾರು ಕಾರ್ಯಕ್ರಮಗಳನ್ನ ಮಾಡಿದೆ. ಪರೀಕ್ಷೆ ದಿನ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಅನಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಗಾಬರಿಗೆ ಅಥವಾ ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
Advertisement
Advertisement
ನಾಳೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಟ್ವಿಟ್ಟರ್ ನಲ್ಲಿ ಶುಭಕೋರಿ, ಕೊಠಡಿ ಒಳಗೆ ಯಾವ ವಸ್ತುಗಳನ್ನ ತೆಗೆದುಕೊಂಡು ಹೋಗಬೇಕು, ಏನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಬೇಕಾದ ವಸ್ತುಗಳು ಮತ್ತು ವಿದ್ಯಾರ್ಥಿಗಳು ತಮ್ಮ ಜೊತೆ ಇಟ್ಟಿಕೊಳ್ಳಬೇಕಾದ ವಸ್ತುಗಳು ಯಾವುದು ಅಂತ ನೋಡೋದಾದರೆ:
Advertisement
ಪರೀಕ್ಷಾ ಕೊಠಡಿ ಒಳಗೆ ವಿದ್ಯಾರ್ಥಿಗಳು ತೆಗೆದುಕೊಂಡು ಹೋಗಬಹುದಾದ ವಸ್ತುಗಳು
* ಪ್ರವೇಶ ಪತ್ರ
* ಕಾಲೇಜಿನ ಗುರುತಿನ ಚೀಟಿ
* ಪೆನ್‍ಗಳು (ನೀಲಿ/ ಕಪ್ಪು ಬಣ್ಣದ ಪೆನ್‍ಗಳು ಮತ್ತು ಸಾಮಾನ್ಯ ಪೆನ್ನುಗಳು)
* ಸ್ಕೇಲ್
* ಪೆನ್ಸಿಲ್
* ಸಿಂಪಲ್ ಕ್ಯಾಲ್ಕುಲೇಟರ್
* ಮುಳ್ಳು ಮಾತ್ರ ಹೊಂದಿರುವ ಸಾಮಾನ್ಯ ಕೈ ಗಡಿಯಾರ
* ಟ್ರಾನ್ಸ್ ಪರೆಂಟ್ ವಾಟರ್ ಬಾಟಲ್
* ಔಷಧಿಗಳು
* ಕನ್ನಡಕ
* ಬಸ್ ಪಾಸ್
Advertisement
— S.Suresh Kumar (@nimmasuresh) March 3, 2020