ಬೀದರ್: ನಲಪಾಡ್ ಯಾವ ಸಂಸ್ಕೃತಿಯಿಂದ ಬಂದಿದ್ದಾರೆ ಎಂದು ನನಗೆ ಗೊತ್ತಿದೆ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್ ಚಡ್ಡಿಗಳಿಗೆ ಬೆಂಕಿ ಹಾಕುವ ನಲಪಾಡ್ ಹೇಳಿಕೆಗೆ ಇಂಧನ ಸಚಿವ ಸುನೀಲ್ ಕುಮಾರ್ ತೀರುಗೇಟು ನೀಡಿದ್ದಾರೆ.
ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಸಂಸ್ಕೃತಿಯಲ್ಲಿ ಯಾವ, ಯಾವ ಚಟುವಟಿಕೆಗಳನ್ನು ಮಾಡಿದ್ದರೋ ಅವರ ಇತಿಹಾಸ ನೋಡಿದರೆ ನಮಗೆ ಗೊತ್ತಾಗುತ್ತದೆ. ನಲಪಾಡ್‍ನಿಂದ ಆರ್‌ಎಸ್‌ಎಸ್ ಹಾಗೂ ಮಕ್ಕಳು ಕಲಿಯಬೇಕಾಗಿದ್ದು ಏನು ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: NSUI ಕಾರ್ಯಕರ್ತರ ಬಂಧನಕ್ಕೆ ವಿರೋಧ – ಬೆಂಗಳೂರಿನಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ
ಈ ರೀತಿ ವಿಕೃತ ಮನಸ್ಸಿನಿಂದ ಬೆಳವಣಿಗೆ ಜಾಸ್ತಿಯಾಗುತ್ತದೆ ಹೊರೆತು ಮತ್ತೇನು ಆಗಲ್ಲ. ಕಾಂಗ್ರೆಸ್‍ನ ನೆಹರು ಮೊದಲ ಬಾರಿಗೆ ಆರ್‌ಎಸ್‌ಎಸ್ ಬ್ಯಾನ್ ಮಾಡಿದರು. ಅವರಿಂದಲೇ ಏನು ಮಾಡುವುದಕ್ಕೆ ಆಗಲಿಲ್ಲ. ಅವರು ನಿಷೇಧ ಮಾಡಿದ ಕಾರಣ ಇಂದು ಆರ್‌ಎಸ್‌ಎಸ್ ಹತ್ತು ಪಟ್ಟು ಬೆಳೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪರಿಷ್ಕೃತ ಪಠ್ಯ ರದ್ದು ಮಾಡಿ, ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸಬೇಕು – ಸಿದ್ದರಾಮಯ್ಯ ಆಗ್ರಹ