– 8-10 ತಿಂಗಳಿಂದ ರಿಸರ್ಚ್ ಮಾಡಿದ್ದಾರೆ ಎಂದ ಸಚಿವ
ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ (Karnataka LokSabha Election) ಅಕ್ರಮ ಆಗಿರೋದು, ಮತಗಳ್ಳತನ ಆಗಿರೋದರ ಬಗ್ಗೆ ರಾಹುಲ್ ಗಾಂಧಿ ಬಳಿ ದಾಖಲಾತಿ ಇದೆ. ಆಗಸ್ಟ್ 8ರ ಪ್ರತಿಭಟನೆ ದಿನ ಅದನ್ನ ಬಿಡುಗಡೆ ಮಾಡ್ತಾರೆ ಅಂತ ಉನ್ನತ ಶಿಕ್ಷಣ ಸಚಿವ ಸುಧಾಕರ್ (MC Sudhakar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರತಿಭಟನೆ (Rahul Gandhi Protest) ವಿಚಾರ ಮತ್ತು ಮೈಸೂರಿನಲ್ಲಿ ಮತಗಳ್ಳತನ ಆಗಿದೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50 ಸಾವಿರ ರೂ. ಗಿಫ್ಟ್ – ಜಮೀರ್ ಅಹ್ಮದ್
ದೆಹಲಿ ಚುನಾವಣೆ (Delhi Election) ಸಮಯದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ನಾನು ಪ್ರಚಾರಕ್ಕೆ ಹೋಗಿದ್ದೆ. ಆಗ ನಮ್ಮ ಅಭ್ಯರ್ಥಿಯೇ ನಮಗೆ ತೋರಿಸಿದ್ರು. ಒಂದೇ ಅಡ್ರೆಸ್ ನಲ್ಲಿ ಎಷ್ಟು ಜನ ಇರೋಕೆ ಸಾಧ್ಯ? ಅಲ್ಲಿ ಅಂತಹ ಅಕ್ರಮವಾಗಿದೆ. ರಾಹುಲ್ ಗಾಂಧಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಅವರು ಶ್ಯಾಡೋ ಪ್ರಧಾನ ಮಂತ್ರಿ ಆಗಿದ್ದಾರೆ. 8-10 ತಿಂಗಳಿಂದ ಈ ಬಗ್ಗೆ ರಿಸರ್ಚ್ ಮಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆ ಆದ ಮೇಲೆ ರಾಹುಲ್ ಗಾಂಧಿಗೂ ಹೆಚ್ಚು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಿ ಅವರು ಎಲ್ಲಾ ದಾಖಲಾತಿ ಬಿಡುಗಡೆ ಮಾಡ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು: ಇಕ್ಬಾಲ್ ಹುಸೇನ್
ರಾಹುಲ್ ಗಾಂಧಿ ಅವರು ಚುನಾವಣೆ ಆಯೋಗಕ್ಕೆ ಡಿಜಿಟಲ್ ಓಟರ್ ಲೀಸ್ಟ್ ಕೊಡಿ ಅಂದರು ಆಯೋಗ ಯಾಕೆ ಕೊಡ್ತಿಲ್ಲ. ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲಾತಿ ಇವೆ. ದೆಹಲಿಯಲ್ಲಿ ಸುದ್ದಿಗೋಷ್ಟಿ ಮಾಡಿ ರಿಲೀಸ್ ಮಾಡ್ತಾರೆ. ಕರ್ನಾಟಕಕ್ಕೆ ಬಂದಾಗ ದಾಖಲಾತಿ ಕೊಡ್ತಾರೆ. ಕರ್ನಾಟಕದಲ್ಲಿ ಅಕ್ರಮ ಆಗಿದೆ ಅಂತ ದಾಖಲಾತಿ ಸಮೇತ ಕೊಡೋದಾಗಿ ರಾಹುಲ್ ಹೇಳಿದ್ದಾರೆ. ಅವರ ಬಳಿ ಖಂಡಿತ ದಾಖಲಾತಿ ಇದೆ ಅನ್ನೋದು ನಮ್ಮ ನಂಬಿಕೆ. ರಾಹುಲ್ ಗಾಂಧಿ ದಾಖಲಾತಿ ಕೊಡ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: ಗುರುವಾರದಿಂದ ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ – ಹೂವಲ್ಲೇ ಕಿತ್ತೂರಿನ ಕೋಟೆ ಸೃಷ್ಟಿ