ಚಿಕ್ಕಬಳ್ಳಾಪುರ: ಸಿದ್ದರಾಮಣ್ಣನವರೇ ನನ್ನನ್ನ ಸೋಲಿಸೋದು ಪಕ್ಕಕ್ಕೆ ಇಡಿ. ಇದು ನಿಮ್ಮ ಅಂತಿಮಯಾತ್ರೆ ಇದು ನಿಮಗೆ ಕೊನೆ ಚುನಾವಣೆ. ನಾನು ನಿಮ್ಮ ರೀತಿಯಲ್ಲಿ ಹೇಳೋದಿಲ್ಲ. ಈ ಸಲನೂ ನೀವು ಗೆಲ್ಲರಿ ನಾನು ಸೋಲಿ ಅಂತ ಹೇಳಲ್ಲ. ಯಾಕೆ ಅಂದ್ರೆ ನಾನು 5 ವರ್ಷ ನಿಮ್ಮ ಜೊತೆ ವಿಶ್ವಾಸದಿಂದ ಇದ್ದೆ. ನಿಮ್ಮ ಭಾಷೆ ನಂಗೂ ಬಳಸಕ್ಕೆ ಬರುತ್ತೆ ನಾನು ಹಳ್ಳಿಯವನೇ. ನೀವು ಹೇಳ್ತಿರಲ್ಲ ವ್ಯಂಗ್ಯವಾಗಿ ಮಾತಾಡಿದ್ರೆ..! ಏಕವಚನದಲ್ಲಿ ಮಾತನಾಡಿದ್ರೂ ಕೂಡ ಜನರ ಸಿಂಪತಿ ಗಳಿಸೋಕೆ ಹಳ್ಳಿ ಭಾಷೆಯಲ್ಲಿ ಮಾತನಾಡ್ತಿರಲ್ಲ. ಆ ಹಳ್ಳಿ ಭಾಷೆ ನಿಮಗಿಂತ ನನಗೆ ಚೆನ್ನಾಗಿ ಬರುತ್ತೆ. ಆದರೆ ನಮ್ಮ ಮನೆಯಲ್ಲಿ ನನಗೆ ಸಂಸ್ಕಾರ ಕಲಿಸಿದ್ದಾರೆ. ನಾನು ಆ ರೀತಿ ಮಾತಾಡಲ್ಲ ಅಂತ ಪರೋಕ್ಷವಾಗಿ ಸಿದ್ದರಾಮಯ್ಯಗೆ ಸಂಸ್ಕಾರ ಇಲ್ಲ ಎಂದು ಸಚಿವ ಸುಧಾಕರ್ (Sudhakar) ಕಿಡಿಕಾರಿದರು.
ಚಿಕ್ಕಬಳ್ಳಾಪುರ (Chikkaballapur) ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾಕರ್, ನಾನು ವೈಯಕ್ತಿಕ ದ್ವೇಷ ಮಾಡಲ್ಲ. ಆದರೆ ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮ ಪ್ರಜೆಗಳ ಧ್ವನಿ ಆಗಿರಲಿಲ್ಲ. ಸುಧಾಕರ್ ತೆಗಳಲು ಮಾಡಿದ ಧ್ವನಿ ಆಗಿತ್ತು ವೈಯುಕ್ತಿಕವಾಗಿ ಟಾರ್ಗೆಟ್ ಮಾಡಿದ್ರು. ಸಿದ್ದರಾಮಯ್ಯನವರು ಮಾತನಾಡಿ ದಮ್ಮಯ್ಯ ಸುಧಾಕರ್ ನ ಸೋಲಿಸಿ ಅಂತ ಕೈ ಮುಗಿದು ಕೇಳಿಕೊಂಡ್ರು. ಇದೇ ಬಾಯಲ್ಲಿ 2013-2018 ರವರೆಗೆ 16 ಸಲ ಬಂದಿದ್ರಲ್ಲಾ ಸಿದ್ದರಾಮಯ್ಯ (Siddaramaiah) ನವರೇ. 223 ಕ್ಷೇತ್ರದಲ್ಲಿ ನಂಬರ್ ಒನ್ ಶಾಸಕ ಸುಧಾಕರ್ ಅಂತಿದ್ರಲ್ಲಾ. ಅವಾಗ ನೀವು ಯಾವ ಸಿದ್ದರಾಮಯ್ಯ ಆಗಿದ್ದೀರಿ..? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸ್ವಲ್ಪ ದಿನ ಸುಮ್ನಿರಿ ರಮೇಶ್ ಎಂದ ಅಮಿತ್ ಶಾ ಸೂತ್ರ ಏನು?
ಈಗ ಏನೇ ಮಾಡಿ ಸುಧಾಕರ್ ಸೋಲಿಸಬೇಕು ಅಂತೀರಾ..? ಯಾವ ಕಾರಣಕ್ಕೆ ಸೋಲಿಸಬೇಕು ಅಂತ ಹೇಳಿ. ಬಡವರಿಗೆ 22000 ಉಚಿತ ನಿವೇಶನ ಕೊಟ್ಟಿರೋದಕ್ಕೆ ಸೋಲಿಸಬೇಕಾ..? ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರೋದಕ್ಕೆ ಸೋಲಿಸಬೇಕಾ..? ಡಿಕೆಶಿ (DK Shivakumar) ವಿರುದ್ಧ ಹೋರಾಟ ಮಾಡಿ ಮೆಡಿಕಲ್ ಕಾಲೇಜು ತಂದನಲ್ಲ ಅದಕ್ಕೆ ಸೋಲಿಸಬೇಕಾ..? ಕಾರಣ ಹೇಳಬೇಕಲ್ವಾ ಅಂತ ಟಾಂಗ್ ನೀಡಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k