ಮೈಸೂರು: ದಿನದಿನದಿಂದ ದಿನಕ್ಕೆ ವಿಧಾನ ಪರಿಷತ್ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಮೈಸೂರು ಜೆಡಿಎಸ್ ಆಭ್ಯರ್ಥಿ ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಗರಂ ಆಗಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಒಂದು ಸೈಟನ್ನು ನಾಲ್ಕು ಜನರಿಗೆ ರಿಜಿಸ್ಟ್ರೇಷನ್ ಮಾಡಿಕೊಡುವವನು. ಯಾವುದೋ ನಿಗಮದ ಅಧ್ಯಕ್ಷ ಆಗಿದ್ದ ವೇಳೆ ಕಿಡ್ನಿ ಮಾರಾಟ ಮಾಡ್ತಿದ್ದ. ಆತ ಕಿಡ್ನಿ ಮಾರಾಟ ಮಾಡೋದ್ರಲ್ಲಿ ನಂಬರ್ ಒನ್ ಎಂದು ಮಂಜೇಗೌಡ ಅವರನ್ನು ಸೋಮಶೇಖರ್ ತೀಕ್ಷ್ಣವಾಗಿ ಟೀಕಿಸಿದ್ದಾರೆ.
Advertisement
Advertisement
ಕಿಡ್ನಿ ಮಾರಾಟಕ್ಕೆ ಫೇಮಸ್ ಆಗಿದ್ದವ ಇಂದು ಜೆಡಿಎಸ್ ಅಭ್ಯರ್ಥಿ. ಇಂತಹ ಜೆಡಿಎಸ್ ಅಭ್ಯರ್ಥಿ ಗೆದ್ದರೆ ಅದು ಮೈಸೂರು, ಚಾಮರಾಜನಗರ ಜನತೆಗೆ ಅವಮಾನ ಎಂದರು. ಇದನ್ನೂ ಓದಿ: ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕು ಅನ್ನೋದನ್ನ ಒಪ್ಪಿಕೊಂಡ ಸಚಿವ ಈಶ್ವರಪ್ಪ
Advertisement
ಅಂತಿಮ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಸಿ.ಎನ್ ಮಂಜೇಗೌಡ ಅವರು ಜೆಡಿಎಸ್ ಗೆ ನೆಗೆದು ಆ ಪಕ್ಷದ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಮಂಜೇಗೌಡರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಹೊಸಬರಾಗಿದ್ದು ಮಾಜಿ ಸಚಿವ ಸಾ.ರಾ ಮಹೇಶ್, ಶಾಸಕರುಗಳಾದ ಕೆ.ಮಹಾದೇವ, ಎಂ.ಅಶ್ವಿನ್ ಕುಮಾರ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.