ಚಿಕ್ಕಬಳ್ಳಾಪುರ: ಮುಂದಿನ 10-12 ವರ್ಷದಲ್ಲಿ ಅರೋಗ್ಯ ಸಚಿವ ಕೆ ಸುಧಾಕರ್ (K Sudhakar) ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿರುವ ರಾಜಕಾರಣಿ ಆಗಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಉತ್ಸವದಲ್ಲಿ (Chikkaballapur Utsav) ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ (ST Somashekar) ಭವಿಷ್ಯ ನುಡಿದಿದ್ದಾರೆ.
ಸುಧಾಕರ್ ಓರ್ವ ದೂರದೃಷ್ಟಿಯ ರಾಜಕಾರಣಿಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ಅವರಿಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ GO FIRST ವಿಮಾನ ಟೇಕಾಫ್
'ಚಿಕ್ಕಬಳ್ಳಾಪುರ ಉತ್ಸವ 2023'ರ ಕ್ರೀಡೋತ್ಸವದ ಅಂಗವಾಗಿ ಇಂದು ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು, ಯುವಕರು, ಯವತಿಯರು, ಮಹಿಳೆಯರು ಹಾಗೂ ಪುರಷರು ಅತ್ಯುತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.@ckb_utsava#ChikkaballapuraUtsava#CKBUtsava pic.twitter.com/zboNTUz551
— Dr Sudhakar K (@mla_sudhakar) January 9, 2023
ಚಿಕ್ಕಬಳ್ಳಾಪುರ ಉತ್ಸವದ 3ನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಘಟಾನುಘಟಿಗಳನ್ನು ಎದುರು ಹಾಕಿಕೊಂಡು ಅವರು ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತಂದರು. ಅನೇಕರನ್ನು ವಿರೋಧ ಮಾಡಿಕೊಂಡು ಮನೆಗಳನ್ನು ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಘಟಾನುಘಟಿಗಳನ್ನು ಎದುರು ಹಾಕಿಕೊಂಡು ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಪ್ರತ್ಯೇಕಿಸಲು ಶ್ರಮಿಸುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ಸುಧಾಕರ್ ಶ್ರಮಿಸುತ್ತಿದ್ದಾರೆ. ಇವರು ಬದ್ಧತೆ ಇರುವ ಸಚಿವರಾಗಿದ್ದು ನಿಮ್ಮ ಋಣ ತೀರಿಸಲು ಕಷ್ಟಪಡುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿದ್ದಾರೆ ಧೀಮಂತ ನಾಯಕರು, ಮೇರು ವ್ಯಕ್ತಿಗಳು, ದುಂಬಿಯಾದ ಹೂವು, ಪ್ರಖ್ಯಾತ ಸ್ಥಳಗಳು, ಇಲ್ಲಿ ಎಲ್ಲವೂ ಪುಷ್ಪಮಯ. ಚಿಕ್ಕಬಳ್ಳಾಪುರ ಉತ್ಸವದ ಫಲಪುಷ್ಪ ಪ್ರದರ್ಶನದ ಸುಂದರ ನೋಟಗಳನ್ನು ಕಣ್ತುಂಬಿಕೊಳ್ಳಿ, ಬನ್ನಿ ಭಾಗವಹಿಸಿ, ಸಂಭ್ರಮದಲ್ಲಿ ಪಾಲ್ಗೊಳ್ಳಿ.@ckb_utsava #ChikkaballapuraUtsava#CKBUtsava pic.twitter.com/deyL7qdkKb
— Dr Sudhakar K (@mla_sudhakar) January 8, 2023
ಸುಧಾಕರ್ ಮಾತನಾಡಿ, ಸಚಿವ ಸೋಮಶೇಖರ್ ಅವರು ನನಗೆ ಸಹೋದರರಿದ್ದಂತೆ. ಅವರು ಹಿರಿಯರು ಅನುಭವಿಗಳು ಅವರ ಮಾರ್ಗದರ್ಶನ ಪಡೆದು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಇಬ್ಬರು ಸಚಿವರು ಫಲಪುಷ್ಪ ಪ್ರದರ್ಶನ, ಆಹಾರ ಮೇಳ ವೀಕ್ಷಣೆ ಮಾಡಿ ಆಹಾರ ಮೇಳದಲ್ಲಿ ದೋಸೆ ಐಸ್‌ಕ್ರೀಂ ಸವಿದು ಗಮನ ಸೆಳೆದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k