ಮೈಸೂರು: ಏಕಲವ್ಯನಗರ ನಿವಾಸಿಗಳು ಮೈಸೂರು (Mysuru) ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ಗೆ (ST Somashekar) ಘೇರಾವ್ ಹಾಕಲು ಯತ್ನಿಸಿದ ಘಟನೆ ನಡೆಸಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ (Kannada Rajyotsava) ಸಮಾರಂಭಕ್ಕೆ ಪ್ರತಿಭಟನೆಯ (Protest) ಬಿಸಿ ತಟ್ಟಿತ್ತು. ಸಚಿವ ಎಸ್.ಟಿ.ಸೋಮಶೇಖರ್‌ಗೆ ಘೇರಾವ್ ಹಾಕಲು ಏಕಲವ್ಯ ನಿವಾಸಿಗಳು ಯತ್ನಿಸಿದಾಗ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ಪ್ರತಿಭಟನಾಕಾರರನ್ನುಪೊಲೀಸರು ತಡೆಯಲು ಮುಂದಾದಾಗ ರಸ್ತೆ ಮಧ್ಯೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಭೇಟಿಯಾದ ಆ್ಯಸಿಡ್ ಸಂತ್ರಸ್ತೆ – ಸರ್ಕಾರಿ ಉದ್ಯೋಗ, ಮನೆ ಕಲ್ಪಿಸುವ ಭರವಸೆ
Advertisement
Advertisement
ಏಕಲವ್ಯ ನಗರದ ನಿವಾಸಿಗಳು ಮನೆಯ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಸ್ಪಂದಿಸುತ್ತಿಲ್ಲವೆಂದು ಕುಪಿತಗೊಂಡು ಇಂದು ಏಕಾಏಕಿ ಪ್ರತಿಭಟನೆಗೆ ಮುಂದಾದರು. ಕಡೆಗೆ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನೂ ಓದಿ: ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!