– ಸುರಕ್ಷತೆ ದೃಷ್ಟಿಯಿಂದ ನಿಮ್ಮನ್ನು ಐಸೋಲೇಶನ್ ವಾರ್ಡಿನಲ್ಲಿಟ್ಟಿದ್ದೇವೆ
ಬಳ್ಳಾರಿ: ನೀವು ಧೈರ್ಯ ಕಳೆದುಕೊಳ್ಳಬೇಡಿ, ನಿಮಗೇನು ಆಗಿಲ್ಲ. ದೇವರ ದಯೆಯಿಂದ ನಿಮ್ಮದು ನೆಗೆಟಿವ್ ರಿಪೋರ್ಟ್ ಬರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಧೈರ್ಯ ತುಂಬಿದ್ದಾರೆ.
ಇಂದು ಶ್ರೀರಾಮುಲು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಹಿನ್ನೆಲೆ ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದ್ದರು. ತಾವು ಕೋವಿಡ್ ಸುರಕ್ಷಾ ಕಿಟ್ ಧರಿಸಿ ಒಳಗಡೆ ತೆರಳಿ ಬೆನ್ನುತಟ್ಟಿ ಅವರಿಗೆ ಧೈರ್ಯ ತುಂಬಿದರು.
Advertisement
ಇಂದು ಬಳ್ಳಾರಿಯ ಜಿಲ್ಲಾಸ್ಪತ್ರೆಯ #Covid19 Isolation Wardಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ, ಸೌಕರ್ಯಗಳ ಪರಿಶೀಲನೆ ನಡೆಸಲಾಯಿತು. ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ, ನಾಡಿನ ಜನರ ಹಿತ ಕಾಯಲು ವೈಯಕ್ತಿಕ ಜೀವನವನ್ನು ಬದಿಗೊತ್ತಿ, ಹಗಲಿರುಳು ಸಲ್ಲಿಸುತ್ತಿರುವ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. pic.twitter.com/AAUunRFoTU
— B Sriramulu (@sriramulubjp) March 26, 2020
Advertisement
ನೀವು ಧೈರ್ಯ ಕಳೆದುಕೊಳ್ಳಬೇಡಿ, ನಿಮಗೇನು ಆಗಿಲ್ಲ. ದೇವರ ದಯೆಯಿಂದ ನಿಮ್ಮದು ನೆಗೆಟಿವ್ ರಿಪೋರ್ಟ್ ಬರುತ್ತದೆ. ಅಲ್ಲಿಯವರೆಗೆ ಐಸೋಲೇಶನ್ ವಾರ್ಡಿನಲ್ಲಿರಬೇಕು. ನಿಮ್ಮೊಂದಿಗೆ ನಾವಿದ್ದೇವೆ, ನಿಮಗೆ ಚಿಕಿತ್ಸೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಿಮ್ಮನ್ನು ದೂರವಿಟ್ಟಿದ್ದೇವೆ ಎಂದು ಅಂದುಕೊಳ್ಳಬೇಡಿ, ದೇಶ ಹಾಗೂ ಎಲ್ಲರ ಸುರಕ್ಷತೆ ದೃಷ್ಟಿಯಿಂದ ನಿಮ್ಮನ್ನು ಐಸೋಲೇಶನ್ ವಾರ್ಡಿನಲ್ಲಿಟ್ಟಿದ್ದೇವೆ ಎಂದು ಹೇಳಿದರು.
Advertisement
ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಐಸೋಲೇಶನ್ ವಾರ್ಡಿನಲ್ಲಿ ಎಷ್ಟು ದಿನಗಳಿಂದ ಇರಿಸಲಾಗಿದೆ ಎಂಬುದು ಸೇರಿದಂತೆ ಕಲ್ಪಿಸಲಾಗುತ್ತಿರುವ ಇನ್ನಿತರ ಚಿಕಿತ್ಸಾ ಕ್ರಮಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಶಾಸಕ ಸೋಮಶೇಖರ ರೆಡ್ಡಿ, ನಾಗೇಂದ್ರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಇನ್ನಿತರ ವೈದ್ಯಾಧಿಕಾರಿಗಳು ಇದ್ದರು.
Advertisement
Today, visited the isolation ward in Bellary District hospital. Patients were enquired about the facilities available in the ward .The doctors & support staff were thanked for their selfless devotion in combating the #COVID19 & serving the public in the interest of the nation. pic.twitter.com/8WG9QrhPvj
— B Sriramulu (@sriramulubjp) March 26, 2020