ಹಾಸನ: ಕೋವಿಡ್ ಇರಬೇಕು ಇಲ್ಲ ನಾವಿರಬೇಕು. ಏಕೆಂದರೆ ಕೋವಿಡ್ ನಮ್ಮನ್ನು ಬಿಟ್ಟು ಅಷ್ಟು ಬೇಗ ಹೋಗಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಜನರ ಜೊತೆಗೆ ಸರ್ಕಾರ ಕೆಲಸ ಮಾಡುತ್ತಿದೆ. ಇಷ್ಟು ದಿನ ನಾವು ತಾಳ್ಮೆಯಿಂದ ಇದ್ದೇವೆ. ಮುಂದೆಯೂ ಯಾರು ತಾಳ್ಮೆ ಕಳೆದುಕೊಳ್ಳಬೇಡಿ. ಕೋವಿಡ್ ನಮ್ಮನ್ನು ಅಷ್ಟು ಬೇಗ ಬಿಟ್ಟು ಹೋಗಲ್ಲ. ನಾವು ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶ್ರೀರಾಮುಲು ಹೇಳಿದರು.
Advertisement
Advertisement
ಕೊರಾನಾ ವಾರಿಯರ್ಸ್ ವಿರುದ್ಧ ಹಲ್ಲೆ ಮಾಡಿದರೆ 5 ವರ್ಷ ಜೈಲು ಗ್ಯಾರಂಟಿ. ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಈಗಾಗಲೇ ಕೆಲವೊಂದು ಚಟುವಟಿಕೆ ಆರಂಭವಾಗಿದೆ. ಮೇ 3ರ ಬಳಿಕವೂ ಲಾಕ್‍ಡೌನ್‍ನಲ್ಲಿ ಸಾಕಷ್ಟು ಸಡಿಲಿಕೆ ಆಗಲಿದೆ. ಆದ್ದರಿಂದ ನಾವು ಆ ಬಳಿಕವೂ ಎಚ್ಚರಿಕೆಯಿಂದ ಇರಬೇಕು. ಕೊರೊನಾಗೆ ರಾಜ್ಯದಲ್ಲಿ 576 ಮಂದಿಗೆ ಕೊರೊನಾ ಸೋಂಕಿತರಿದ್ದು, ಸಾಕಷ್ಟು ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೆಲ ತಜ್ಞರು ನನ್ನನ್ನು ಭೇಟಿ ಮಾಡಿ ಕೆಲ ಸಲಹೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಮತ್ತೆ ಪ್ಲಾಸ್ಮಾ ತೆರಪಿ ಚಿಕಿತ್ಸೆ ಮುಂದುವರಿಸುತ್ತೇವೆ. ಇದರಿಂದ ನಮಗೆ ಒಳ್ಳೆಯದಾಗುತ್ತಿದೆ ಎಂದರು.
Advertisement
ರಾಜ್ಯದಲ್ಲಿ ಪೊಲೀಸರು, ವೈದ್ಯರು, ನರ್ಸ್, ಮಾಧ್ಯಮ ಮಿತ್ರರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಹಲ್ಲೆ ಮಾಡಿದವರಿಗೆ 5 ವರ್ಷ ಜೈಲು ಶಿಕ್ಷೆ ಆಗಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭ ಮಾಡಿದ್ದೇವೆ. ಆರಂಭ ಯಶಸ್ಸು ನಮಗೆ ಲಭಿಸಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಇದನ್ನು ಆರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.