ಮೊದ್ಲು ಕುಮಾರಸ್ವಾಮಿ ಪ್ರಮಾಣ ಮಾಡ್ಲಿ, ಆಮೇಲೆ ಮಾತಾಡ್ತೀನಿ: ದರ್ಶನಾಪುರ

Public TV
1 Min Read
DARSHANAPURA

ಯಾದಗಿರಿ: ಕಾಂಗ್ರೆಸ್ (Congress) ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರರಿಂದ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮೊದಲು ನಾನು ಬಹಳ ಸ್ವಚ್ಛ ಇದ್ದೆನೆ ಪ್ರಮಾಣ ಮಾಡಲಿ, ಆ ಮೇಲೆ ನಾವು ಪ್ರಮಾಣ ಮಾಡೋದನ್ನ ನೋಡೋಣ ಎಂದು ಹೇಳುವ ಮೂಲಕ ಹೆಚ್‍ಡಿಕೆಗೆ ಕೌಂಟರ್ ಕೊಟ್ಟಿದ್ದಾರೆ.

ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿಯನ್ನ ಮೀರಿಸುವವರು ಯಾರೂ ಇಲ್ಲ. ಕ್ರಿಕೆಟ್ ಮ್ಯಾಚ್ ನೋಡಿದ್ದ ಸಿಎಂ ಸಿದ್ದರಾಮಯ್ಯಗೆ (Siddaramaiah) ಟೀಕೆ ಮಾಡಿದ್ರು. ಅವರು ಸಿನಿಮಾಗಳನ್ನ ಮಾಡಲ್ವಾ, ಅವರ ಮಗ ಸಿನಿಮಾ ಮಾಡ್ತಾರೆ. ಸಿನಿಮಾ ಮಾಡೋರಿಗೆ ಬೈಬೇಕಾ ನೋಡುವವರಿಗೆ ಬೈ ಬೇಕಾ ಎಂದು ತಿರುಗೇಟು ನೀಡಿದ್ರು. ಇದನ್ನೂ ಓದಿ: ಹುಲಿ ಉಗುರು ಯಾರೇ ಧರಿಸಿದರೂ ಕ್ರಮ ತೆಗೆದುಕೊಳ್ಳಿ: ಕೇಂದ್ರ ಸಚಿವ

ಕುಮಾರಸ್ವಾಮಿ (HD Kumaraswamy) ಬಗ್ಗೆ ಮಾತಾಡೋಕೆ ಏನೂ ಉಳಿದಿಲ್ಲ. ಕುಮಾರಸ್ವಾಮಿಗೆ ಅಷ್ಟು ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಯಾಕಂದರೆ ಅವರು ಹತಾಶರಾಗಿದ್ದಾರೆ. ಮೊದಲು ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅಂತಿದ್ರು, ಈಗ ಡಿಕೆಶಿ ಅಂತಿದ್ದಾರೆ. ಬಿಜೆಪಿ ಬಗ್ಗೆ ಟೀಕೆ ಮಾಡ್ತಾಯಿದ್ರು. ಈಗ ಅವರ ಜೊತೆಯೇ ಹೋಗಿದ್ದಾರೆ. ಕುಮಾರಸ್ವಾಮಿ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ. ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದವನು ಎಂದು ವಾಗ್ದಾಳಿ ನಡೆಸಿದ್ರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article