ಬೆಂಗಳೂರು: ಬಿಜೆಪಿಯಲ್ಲೇ ಬಿ.ಎಲ್ ಸಂತೋಷ್ (BL Santosh) ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ಸರ್ಕಾರವೇ ಇರಲಿ ಅಂತ ಬಯಸುತ್ತಿದ್ದಾರೆ. ಅವರ ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಟಾಂಗ್ ನೀಡಿದ್ದಾರೆ.
40 ಜನ ಬಿಜೆಪಿ (BJP) ಸೇರ್ತಾರೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಾರಕಿಹೊಳಿ, ಈ ಸನ್ನಿವೇಶಕ್ಕೆ ಇಂತಹ ಮಾತು ಸರಿಯಲ್ಲ. ಬಿ.ಎಲ್ ಸಂತೋಷ್ ಅವರು ರಾಷ್ಟ್ರಮಟ್ಟದ ರಾಜಕಾರಣ ಮಾಡುವವರು. 40 ಜನರನ್ನ ತೆಗೆದುಕೊಂಡು ಏನು ಮಾಡ್ತಾರೆ ಅಂತಾ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: G20ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ
ಯಾವುದೇ ಸರ್ಕಾರ ಬೀಳುತ್ತೆ ಅನ್ನೋದು ಸರಿಯಲ್ಲ. ಸರ್ಕಾರ ಬಂದು 3 ತಿಂಗಳಾಗಿದೆ. ಸರ್ಕಾರ ಬೀಳುತ್ತೆ ಅಂತ 5 ವರ್ಷದ ವರೆಗೂ ಈ ಮಾತು ಇದ್ದೇ ಇರುತ್ತದೆ. ಆದರೆ ಆ ಕಾರ್ಯ ಸಫಲ ಆಗೋದಿಲ್ಲ. ಪ್ರಯತ್ನ ಅಂತೂ ಅವರದ್ದು ಇದ್ದೇ ಇರುತ್ತದೆ ಅಂತ ಕುಟುಕಿದ್ದಾರೆ. ಇದನ್ನೂ ಓದಿ: 11% ಏರಿಕೆ, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?
ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್‌ಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಆ ಭಾಗದಲ್ಲಿ ಸದ್ಯಕ್ಕೆ ಯಾರೂ ಇಲ್ಲ. ಇದ್ದರೆ ನೇರವಾಗಿ ಸಿಎಂ, ಡಿಸಿಎಂ ಭೇಟಿ ಮಾಡ್ತಾರೆ. ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವರು ಬರೋದಕ್ಕೆ ರೆಡಿ ಇದ್ದಾರೆ. ಅನೇಕರು ಭೇಟಿಯಾಗ್ತಾ ಇದ್ದಾರೆ. ಓಪನ್ ಆಗಿಯೇ ಭೇಟಿ ಆಗುತ್ತಿದೆ. ಕೆಲವೊಂದು ಪರೋಕ್ಷವಾಗಿ ಸಂಪರ್ಕ ಆಗ್ತಾ ಇದೆ. ಎಲ್ಲದಕ್ಕೂ ಸಮಯ ಸಂದರ್ಭ ಬೇಕಲ್ಲವೇ? ಯಾರೇ ಬಂದರೂ ಸ್ವಾಗತ ಮಾಡ್ತೀವಿ ಅಂತಾ ಸ್ಪಷ್ಟಪಡಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]