ಬೆಳಗಾವಿ: ಆಪರೇಷನ್ ಕಮಲಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೊಸ ವ್ಯಾಖ್ಯಾನ ನೀಡುವ ಮೂಲಕ ಬಿಜೆಪಿಯ ಕಾಲೆಳೆದಿದ್ದಾರೆ.
ಇನ್ನು ನಾಲ್ಕು ವರ್ಷ ಮೂರು ತಿಂಗಳು ಬಿಜೆಪಿ ಆಪರೇಷನ್ ಕಮಲ ಮಾಡುತ್ತಲೇ ಇರುತ್ತದೆ. ಸಮ್ಮಿಶ್ರ ಸರ್ಕಾರ ಅನ್ನೋದು ಎಲ್‍ಓಸಿ ಇದ್ದಂಗೆ. ಯಾವಾಗಲು ನಾವು ಅಲರ್ಟ್ ಆಗಿರಬೇಕು. ಇಲ್ಲದಿದ್ರೆ ನಮ್ಮ ಮೇಲೆ ಫೈರ್ ಮಾಡಿ ಬಿಡುತ್ತಾರೆ ಅಂತಾ ರಾಜಕೀಯವನ್ನು ಯುದ್ಧಭೂಮಿಗೆ ಹೋಲಿಕೆ ಮಾಡಿ ಮಾತನಾಡಿದ್ರು. ಕಾಶ್ಮೀರದ ಎಲ್.ಒ.ಸಿಯಲ್ಲಿ ನಾವಿದ್ದೇವೆ ಅವರು ಫೈರ್ ಮಾಡಿದ್ರೇ ನಾವು ಮಾಡುತ್ತೇವೆ. ಈಗ ನಾವು ಗೆದ್ದಿದ್ದೇವೆ ಎಂದು ಸಚಿವರು ತಿಳಿಸಿದರು.
Advertisement
Advertisement
ಶಾಸಕ ಗಣೇಶ್ ಮತ್ತು ಆನಂದ್ ಸಿಂಗ್ ಗಲಾಟೆ ವಿಚಾರವಾಗಿ ಮಾತನಾಡಿದ ಸಚಿವರು, ಕೇವಲ ಒಂದು ದಿನ ಈಗಲಟನ್ ರೆಸಾರ್ಟ್ ನಲ್ಲಿ ನಾನಿದ್ದೆ. ಮರುದಿನ ನೀವು ಇಲ್ಲಿರೋದು ಅವಶ್ಯಕತೆ ಇಲ್ಲ ಎಂದು ಪಕ್ಷದ ಹಿರಿಯರು ನಮ್ಮನ್ನು ಕಳುಹಿಸಿದರು. ಮರುದಿನ ಗಲಾಟೆ ನಡೆದಿದ್ದರಿಂದ ಹೆಚ್ಚಿನ ಮಾಹಿತಿ ನನಗಿಲ್ಲ. ಗಲಾಟೆಗೂ ಮುನ್ನ ಅಲ್ಲಿ ಸಂದರ್ಭ ಏನಿತ್ತು? ಎಂಬುದರ ಬಗ್ಗೆ ಗೊತ್ತಿಲ್ಲ. ಕೆಲವೊಂದು ಬಾರಿ ಈ ರೀತಿಯ ಘಟನೆಗಳು ನಡೆಯುತ್ತವೆ. ಆರಂಭದಲ್ಲಿ ಶಾಸಕ ಗಣೇಶ್ ವಿರುದ್ಧ ಯಾರು ದೂರು ದಾಖಲಿಸಿರಲಿಲ್ಲ. ಇದೀಗ ದೂರು ದಾಖಲಾಗಿದ್ದು, ಪೊಲೀಸರು ಶಾಸಕರನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.
Advertisement
ಆನಂದ್ ಸಿಂಗ್ ಹಲ್ಲೆಯ ಬಳಿಕ ನಾಯಕರ ಭಿನ್ನ ಹೇಳಿಕೆಗಳ ಕುರಿತು ಉತ್ತರಿಸಿದ ಸಚಿವರು, ರಾಜಕಾರಣದಲ್ಲಿ ಯಾವಗಳು ಒನ್ ಪ್ಲಸ್ ಒನ್ ಟು ಆಗಲ್ಲ. ಕೆಲವೊಮ್ಮೆ ಥ್ರೀ ಫೋರ್ ಆಗುತ್ತೆ ಎಂದು ಹೇಳಿ ನಕ್ಕರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv