-ನಾನು 20 ವರ್ಷ ಬಿಜೆಪಿಯಲ್ಲಿದ್ದವನು, ನನಗೆ ಬಹಳಷ್ಟು ಶಾಸಕರು ಆತ್ಮೀಯರು
ಮೈಸೂರು: ಬಿಜೆಪಿ ನಮ್ಮ ಓರ್ವ ಶಾಸಕರನ್ನು ಸೆಳೆದ್ರೆ, ಕೌಂಟರ್ ಕೊಡೋದಕ್ಕೆ ನಾವು ರೆಡಿಯಾಗಿದ್ದೇವೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಅವರು ಅಭಿವೃದ್ಧಿಪರವಾದ ಆಡಳಿತನ್ನು ರಾಜ್ಯದ ಜನತೆಗೆ ನೀಡುತ್ತಿದ್ದಾರೆ. ಆದ್ರೆ ಸರ್ಕಾರ ಉರುಳಿಸಲು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿಯ 10 ಶಾಸಕರು ನನ್ನ ಸಂಪರ್ಕದಲ್ಲಿರೋ ವಿಷಯ ಜೆಡಿಎಸ್ ವರಿಷ್ಠರಿಗೆ ಗೊತ್ತಿದೆ. ನಾನು ಸಹ 20 ವರ್ಷ ಬಿಜೆಪಿಯಲ್ಲಿ ಇದ್ದವನು. ಹಲವು ಶಾಸಕರು ನನಗೆ ಆತ್ಮೀಯರು ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಇದೂವರೆಗೆ ನಮ್ಮ ಯಾವ ಶಾಸಕರನ್ನು ಬಿಜೆಪಿ ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದರೂ ನಮ್ಮ ಯಾವ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ. ನಮ್ಮದು ಪ್ರಾದೇಶಿಕ ಪಕ್ಷವೇ ಆಗಿರಬಹುದು. ಆದ್ರೆ ನಾವು ಸುಮ್ಮನೆ ಕುಳಿತಿಲ್ಲ. ಬಿಜೆಪಿ ನಮ್ಮ ಒಬ್ಬ ಶಾಸಕನನ್ನು ಸೆಳೆದ್ರೆ, ಕೌಂಟರ್ ಕೊಡೋದಕ್ಕೆ ಸಿದ್ಧವಾಗಿದ್ದೇವೆ. ಅಲ್ಲಿ ಪ್ರಾದೇಶಿಕ ಪಕ್ಷ ಮತ್ತು ನಾಯಕರು ಶಕ್ತಿ ಏನು ಎಂಬುವುದನ್ನು ತೋರಿಸುತ್ತೇವೆ ಎಂದು ಗುಡುಗಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv