ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ತಮ್ಮ ಮಾತನ್ನು ಮುಗಿಸಿ ವೇದಿಕೆಯಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ಈ ವೇಳೆ ಸಚಿವ ರೇವಣ್ಣ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಭಾಷಣವನ್ನು ಶುರುಮಾಡಿದ್ದಾರೆ. ಆದರೆ ತಂದೆಯ ಭಾಷಣದ ವೇಳೆಯು ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.
Advertisement
ಕಾಂಗ್ರೆಸ್ ಪಕ್ಷದ ಮಧ್ಯೆ ಸಿಕ್ಕಾಕಿಕೊಂಡ ಕರ್ನಾಟಕ ಸಿಎಂ ಕ್ಲರ್ಕ್ ನಂತಾಗಿದ್ದಾರೆಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಚ್‍ಡಿಡಿ, ಮೋದಿ ಬಗ್ಗೆ ಬೆಳಗ್ಗೆಯಿಂದ ಸಂಜೆಯವರೆಗೂ ತಮಾಷೆ ಮಾಡಬೇಡಿ. ಅದೇನು ದೊಡ್ಡ ವಿಷಯವಲ್ಲ ಬಿಟ್ಟಾಕಿ ಎಂದು ಹೇಳಿ ವ್ಯಂಗ್ಯ ಮಾಡಿದ್ದಾರೆ.
Advertisement
Advertisement
56 ವರ್ಷ ಈ ಜಿಲ್ಲೆಯಲ್ಲಿ ನನ್ನನ್ನ ರಾಜಕೀಯವಾಗಿ ಬೆಳೆಸಿದ್ದೀರಿ. ನನಗೆ ಯಾರೂ ಶತ್ರುಗಳಿಲ್ಲ, ನಾನು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ನಾನು ಯಾರ ಮನಸನ್ನೂ ನೋಯಿಸಿಲ್ಲ. ಅದೇ ರೀತಿ ಪಕ್ಷ ನನ್ನ ಮನೆಯ ಆಸ್ತಿಯಲ್ಲ. ಇದು ಎಲ್ಲರಿಗೂ ಸೇರಿದ ಪಕ್ಷವಾಗಿದೆ. ಕುಮಾರಸ್ವಾಮಿ 38 ಜನರನ್ನ ಕಟ್ಟಿಕೊಂಡು ಸಿಎಂ ಆಗಿದ್ದು, ಅವರ ನೋವೇನು ಎಂದು ನನಗೆ ಗೊತ್ತಿದೆ. ಕಾಂಗ್ರೆಸ್ಸಿನ 78 ಜನರನ್ನ ಕಟ್ಟಿಕೊಂಡು ಸರ್ಕಾರ ನಡೆಸಬೇಕು. ಮೈತ್ರಿ ಸರ್ಕಾರದಲ್ಲಿ ಪಕ್ಷವೂ ಉಳಿಯಬೇಕು ಎಂದು ದೇವೇಗೌಡರು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv