ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ಅವರ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಕರುನಾಡಿನ ದೇಗುಲಗಳ ಮಾದರಿಯಲ್ಲಿ ಸೆಟ್ ನಿರ್ಮಿಸಲಾಗಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ರಕ್ಷಿತಾ ಹಾಗೂ ಲಲಿತ್ ಸಂಜೀವ್ ರೆಡ್ಡಿ ಅವರ ವಿವಾಹ ಸಮಾರಂಭ ನಡೆಯುತ್ತಿದೆ. ಮದುವೆಗಾಗಿ 40 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಹಾಗೂ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ.
Advertisement
Advertisement
40 ಎಕರೆಯಲ್ಲಿ 27 ಎಕರೆ ಮದುವೆ ಸೆಟ್, 4 ಎಕರೆಯಲ್ಲಿ ಮದುವೆ ಕಾರ್ಯ, 15 ಎಕರೆ ಪಾರ್ಕಿಂಗ್ ಮತ್ತು ಆರು ಎಕರೆ ಊಟಕ್ಕಾಗಿ ಸೆಟ್ ನಿರ್ಮಾಣಗೊಂಡಿದೆ. ಮುಹೂರ್ತ ಮಂಟಪದಲ್ಲಿ ನಾಲ್ಕು ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಏಳು ಸಾವಿರ ಮಂದಿ ಒಂದೇ ಬಾರಿ ಊಟ ಮಾಡಬಹುದಾಗಿದೆ. ಮದುವೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ.
Advertisement
Advertisement
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮದುವೆ ಸಂದರ್ಭದಲ್ಲಿ ಮೇಕಪ್ ಮಾಡಿದವರೇ ರಕ್ಷಿತಾಗೆ ಮೇಕಪ್ ಮಾಡಿದ್ದಾರೆ. ಉದ್ಯಮಿ ಅಂಬಾನಿ ಮಗನ ಮದುವೆ ಫೋಟೋ, ವಿಡಿಯೋ ತೆಗೆದ ಜಯರಾಮನ್ ಪಿಳ್ಳೈ ಜೊತೆ ದಿಲೀಪ್ ಅವರು ಶ್ರೀರಾಮುಲು ಪುತ್ರಿಯ ಮುದುವೆ ಫುಲ್ ವಿಡಿಯೋ ಚಿತ್ರೀಕರಿಸಿದ್ದಾರೆ.
ಇತ್ತ ಊಟಕ್ಕೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಪಾತಿ, ಚಟ್ನಿ, ಎರಡು ರೀತಿ ಪಲ್ಯ, ಬಾದುಷಾ, ಮೈಸೂರು ಪಾಕ್ ರೀತಿಯ ಫ್ರೂಟ್ ಸ್ವೀಟ್, ಪಲಾವ್, ಮೊಸರು ಬಜ್ಜಿ, ಮಿರ್ಚಿ, ಉಪ್ಪಿನ ಕಾಯಿ, ಮಜ್ಜಿಗೆ, ಐಸ್ ಕ್ರೀಂ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ.