ಬೆಂಗಳೂರು: ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯ ಕಣ್ತಪ್ಪಿನಿಂದ ಆಗಿರುವ ಪ್ರಮಾದ. ನಿನ್ನೆಯ ಆದೇಶವನ್ನು ಹಿಂಪಡೆಯಲಾಗಿದೆ ಅಂತಾ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇಂದು ಹೇಳಿದ್ದಾರೆ.
2015 ಮತ್ತು 2017ರಲ್ಲಿ 414 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ 3,166 ಆರೋಪಿಗಳಿದ್ದಾರೆ. 2,806 ಹಿಂದುಗಳು, 341 ಮುಸ್ಲಿಂ ಮತ್ತು ಇತರೆ 17 ಜನ ಆರೋಪಿಗಳಿದ್ದಾರೆ. ಯಾವ ರೀತಿಯ ಪ್ರಕರಣಗಳನ್ನು ಹಿಂಪಡೆಯುವ ಬೇಕೆಂಬುದರ ಬಗ್ಗೆ ಗೃಹ ಇಲಾಖೆಯ ಅಭಿಪ್ರಾಯವನ್ನು ಕೇಳಲಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ
Advertisement
ಕೋಮು ಗಲಭೆಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಅಭಿಯೋಜನೆಯಿಂದ ಕೇಸ್‍ಗಳನ್ನು ವಾಪಸ್ ಪಡೆಯಲು ಕೋರಿ ಪತ್ರ ಬರೆಯಲಾಗಿತ್ತು. 5 ವರ್ಷಗಳಲ್ಲಿ 20 ಜಿಲ್ಲೆ, ಬೆಳಗಾವಿ ಮತ್ತು ಮಂಗಳೂರು ಕಮಿಷನರೇಟ್‍ಗಳಲ್ಲಿ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಅಭಿಯೋಜನೆಯನ್ನು ಕೋರಿತ್ತು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ
Advertisement
ಮಹದಾಯಿ, ಕಾವೇರಿ, ವಿಚಾರದಲ್ಲಿ ರೈತರ ಮೇಲಿನ ಕೇಸ್ ಗಳನ್ನ ಹಿಂಪಡೆದಿದ್ದೀವಿ. ಟಿಪ್ಪು-ಜಯಂತಿ ವೇಳೆ ಹಲವಡೆ ಪರ ವಿರೋಧದ ಪ್ರತಿಭಟನೆಗಳು ನಡೆದಿವೆ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳನ್ನು ನಾವು ಹಿಂಪಡೆಯುವುದಿಲ್ಲ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳು ಇಲ್ಲದೆ ಇರುವವರ ಕೆಲ ಪ್ರಕರಣಗಳನ್ನ ನಾವು ಕೈಬಿಟ್ಟಿದ್ದೇವೆ ಅಂತ ಶುಕ್ರವಾರ ಸಚಿವರು ತಮ್ಮ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದರು.
Advertisement
https://www.youtube.com/watch?v=d5vZRulRL9E
Advertisement
https://www.youtube.com/watch?v=58NOGrYA4y4
https://www.youtube.com/watch?v=QxXjt8cAJfo