ಚಿಕ್ಕಬಳ್ಳಾಪುರ: ಕೋಮುಗಲಭೆ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಿರುವ ಸರ್ಕಾರದ ಕ್ರಮವನ್ನು ಗೃಹಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ, ಕಾವೇರಿ, ವಿಚಾರದಲ್ಲಿ ರೈತರ ಮೇಲಿನ ಕೇಸ್ ಗಳನ್ನ ಹಿಂಪಡೆದಿದ್ದೀವಿ. ಟಿಪ್ಪು-ಜಯಂತಿ ವೇಳೆ ಹಲವಡೆ ಪರ ವಿರೋಧದ ಪ್ರತಿಭಟನೆಗಳು ನಡೆದಿವೆ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳನ್ನು ನಾವು ಹಿಂಪಡೆಯುವುದಿಲ್ಲ. ಆಸ್ತಿ-ಪಾಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳು ಇಲ್ಲದೆ ಇರುವವರ ಕೆಲ ಪ್ರಕರಣಗಳನ್ನ ನಾವು ಕೈಬಿಟ್ಟಿದ್ದೇವೆ ಅಂತ ಹೇಳಿದ್ರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ
Advertisement
Advertisement
ಯಡಿಯೂರಪ್ಪ ಈ ತರ ಎಷ್ಟು ಕೇಸ್ ಮಾಡಿದ್ದಾರೆ ಪಟ್ಟಿ ಕೊಡ್ತೀನಿ. ಉತ್ತರ ಪ್ರದೇಶದಲ್ಲಿ 20 ಸಾವಿರ ಕೇಸ್ ವಿತ್ ಡ್ರಾ ಮಾಡಿದ್ದಾರೆ. ಪಿಎಫ್‍ಐ, ಎಸ್ ಡಿಪಿಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಅಂತ ಆರೋಪ ವ್ಯಕ್ತವಾಗುತ್ತಿದೆ. ನಾವು ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಬಿಜೆಪಿಯವರೇ ದಕ್ಷಿಣ ಕನ್ನಡದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದವರು ಅಂತ ಅವರು ತಿಳಿಸಿದ್ರು.
Advertisement
Advertisement
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ಬಂದ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ಈ ಮಾತುಗಳನ್ನ ಬಿಟ್ಟು ಕೆಲಸ ಮಾಡೋದು ಕಲೀಬೇಕು. ಲೆಕ್ಕ ಕೇಳೋಕೆ ಅಮಿತ್ ಷಾ ಯಾರು? ಯಡಿಯೂರಪ್ಪ ಯಾರು? ಅಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿ ಇದ್ದಾರಾ..? ಅವರಿಗೂ ಇದಕ್ಕೂ ಲೆಕ್ಕ ಕೇಳೋದಕ್ಕೂ ಸಂಬಂಧ ಇಲ್ಲ ಅಂದ್ರು.
ಮೋದಿಯವರು ರಾಜ್ಯಕ್ಕೆ ಬಂದಾಗ ಬಂದ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ರೈತರ ಪರ ಸರ್ಕಾರವಾಗಿದೆ. ನಿನ್ನೆಯ ಬಂದ್ ಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾನು ಮೋದಿ ಬಂದಾಗ ಬಂದ್ ಬೇಡ ಅಂತ ಹೇಳ್ತಿನಿ. ಸಂಘಟನೆಯವರು ನನ್ನ ಮಾತು ಕೇಳ್ತಾರಾ..? ಮಹದಾಯಿ ವಿಚಾರದಲ್ಲಿ ಅಮಿತ್ ಶಾ, ಮೋದಿ ಗಮನ ಸೆಳೆಯಲು ಬಂದ್ ಮಾಡಲಾಗುತ್ತಿದೆ. ಮಹದಾಯಿ ಬಗ್ಗೆ ಅಮಿತ್ ಶಾ ತುಟಿಕ್ ಪಿಟಿಕ್ ಅನ್ನಲಿಲ್ಲ. ಮೋದಿ ಮಹದಾಯಿ ವಿಚಾರದಲ್ಲಿ ಏನೂ ಮಾತೋಡೋದೆ ಇಲ್ಲ ಅಂತ ಕಿಡಿಕಾರಿದ್ರು.