ತುಮಕೂರು: ಅಯೋಧ್ಯೆಯ (Ayodhya Ram Mandir) ಭಗವಾನ್ ಶ್ರೀ ರಾಮನನ್ನು ಟೂರಿಂಗ್ ಟಾಕೀಸ್ ಗೊಂಬೆ ಎಂದು ಅವಮಾನಿಸಿಯೂ ಸಚಿವ ರಾಜಣ್ಣ (KN Rajanna) ಸಮರ್ಥಿಸಿಕೊಂಡಿದ್ದಾರೆ.
ತುಮಕೂರಿನ (Tumakuru) ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಣ್ಣ, ನಾನು ರೈತ. ಈ ಹಿಂದೆ ಹೊಲಕ್ಕೆ ಹೋಗುವಾಗ ಹಸುವಿನ ಸಗಣಿ ತೆಗೆದುಕೊಂಡು ಹೋಗುತ್ತಿದ್ದೆ. ಸಗಣಿಯನ್ನೇ ಒಂದು ಮೂರ್ತಿಯನ್ನಾಗಿ ಮಾಡಿ, ಅದಕ್ಕೆ ಗರಿಕೆ ಹುಲ್ಲು ಹಿಟ್ಟು ಪೂಜೆ ಮಾಡ್ತಿದ್ದೆ. ಹಾಗೆಯೇ ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡ್ತಿದ್ವಿ. ಅದು ನಮ್ಮ ನಂಬಿಕೆ. ಬೊಂಬೆಯನ್ನು ದೇವರು ಅಂತ ಹೇಳಿದರೆ ಏನು ತಪ್ಪು. ಬೊಂಬೆಯಲ್ಲಿ ದೈವತ್ವ ಇರುವುದಿಲ್ಲವಾ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ಬಾಬ್ರಿ ಮಸೀದಿ ಬೀಳಿಸಿದ ಸಂದರ್ಭದಲ್ಲಿ ಟೆಂಟ್ ನಲ್ಲಿ ಎರಡು ಗೊಂಬೆಗಳನ್ನು ಇಟ್ಟು ಇದೇ ಶ್ರೀರಾಮ ಅಂದ್ರು. ಅಲ್ಲಿ ಯಾವುದೇ ಪಾಸಿಟಿವ್ ವೈಬ್ರೇಟ್ ಇರಲಿಲ್ಲ ಅಂತಾ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಯೂ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರು ನನ್ನನ್ನ ರಾವಣ ಎಂದಿದ್ದಾರೆ. ನನಗೆ ಬೇಜಾರಿಲ್ಲ, ರಾವಣ ಎಂದು ಅನ್ನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ ರಾವಣನಂತಹ ದೈವ ಭಕ್ತ ಬೇರೆ ಯಾರೂ ಇರಲಿಲ್ ಎಂದರು. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?
ಹಿಂದೆ ಅಣ್ಣ ದೊರೈ ಅವರು ರಾಮಾಯಣಕ್ಕೆ ಬದಲಾಗಿ ರಾವಣಾಯಣ ಅಂತ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆಯ ಮೇಲೆ ಬಲತ್ಕಾರ ಮಾಡುವುದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ಲವೇ ಎಂದು ಪ್ರಶ್ನೆ ಮಾಡಿದರು. ನಾನು, ಶ್ರೀರಾಮ ಮತ್ತು ರಾವಣ ಇಬ್ಬರ ಪರನೂ ಇದ್ದೇನೆ. ನನ್ನ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ಈ ಹೇಳಿಕೆಯಿಂದ ನಾನು ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.