ಬೆಂಗಳೂರು: ನಮ್ಮದು ಕಾಂಗ್ರೆಸ್ ಪಾರ್ಟಿ ಅಲ್ಲ. ಬೇಲ್ ನಲ್ಲಿ ಇರುವ ಪಾರ್ಟಿ ಅಲ್ಲ ಎಂದು ಸಚಿವ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಟಿಕೆಟ್ ಕೊಡಬೇಕು, ಕೊಡಬಾರದು ಅನ್ನೋದನ್ನು ಪಾರ್ಟಿ ತೀರ್ಮಾನ ಮಾಡುತ್ತೆ. ಕಳೆದ ಬಾರಿ ಯಾವ ರೀತಿ ಓಡಾಡಿದೆನೋ ಅದೆ ರೀತಿ ಓಡಾಡ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ನೋ ರಿಟೈರ್ಮೆಂಟ್ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಪ್ರಧಾನಿ ಏನು ಹೇಳ್ತಾರೋ ಅದನ್ನು ಚಾಚೂ ತಪ್ಪದೆ ನಡೆಯುತ್ತೇನೆ ಅಂತ ಯಡಿಯೂರಪ್ಪ ಹೇಳ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಇವತ್ತು ಕಾಂಗ್ರೆಸ್ ಜಗಳ ಹಾದಿಬೀದಿ ರಂಪ ಮಾಡುತ್ತಿದ್ದಾರೆ. ಯಾರಿಗೆ ಟಿಕೆಟ್ ಕೊಡಬೇಕು..? ಯಾರಿಗೆ ಟಿಕೆಟ್ ಕೊಡಬಾರದು ಅಂತಾ ಹೈಕಮಾಂಡ್ ತೀರ್ಮಾನಿಸಿದೆ. ಗಟ್ಟಿಯಾದ ಹೈಕಮಾಂಡ್ ನಮ್ಮದು. ನಾವು ಸಿಎಂ ಬಸವರಾಜ ಬೊಮ್ಮಾಯಿ ಬಿಎಸ್‍ವೈ ಭೇಟಿ ಮಾಡಿದೆವು. ಅವರು ನಗುನಗುತ್ತಲೇ ಮಾತನಾಡಿದ್ರು. ದೊಡ್ಡ ದೊಡ್ಡ ರ್ಯಾಲಿ ಮಾಡೋಣ ಎಂದಿದ್ದಾರೆ ಅಂದ್ರು. ಇದನ್ನೂ ಓದಿ: ಸಂಸತ್‍ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ಗೆ ಬೀಳ್ಕೊಡುಗೆ
Advertisement
Advertisement
ದೊಡ್ಡಬಳ್ಳಾಪುರ ರ್ಯಾಲಿ ಅನೌನ್ಸ್ ಮಾಡಿದ್ದೇನೆ. ಮುಂದೆ ಯಾವ್ಯಾವ ಜಿಲ್ಲೆಯಲ್ಲಿ ಮಾಡಬೇಕು..? ಅದರ ಬಗ್ಗೆಯೂ ಮಾತಾಡ್ತೇನೆ. ನನ್ನ ಜೀವವೇ ಬಿಜೆಪಿ ಅಂತ ಹೇಳುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮುಗಿಸೋಕೆ ಜಮೀರ್‍ಗೆ ಸುಪಾರಿ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಹಳಷ್ಟು ಜನಕ್ಕೆ ನಾವು ಸುಪಾರಿ ಕೊಟ್ಟಿದ್ದೇವೆ. ನೋಡ್ತಾ ಇರಿ ಯಾರ್ಯಾರು ಬರ್ತಾರೆಂದು ಅಂದ್ರು.
ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ. ಅವರು ನಮ್ಮ ಬಗ್ಗೆ ಏನು ಹೇಳ್ತಾರೆ, ಅವರದನ್ನ ಮೊದಲು ಸರಿಪಡಿಸಿಕೊಳ್ಳಲಿ. ವಿರೋಧ ಪಕ್ಷದ ಸ್ಥಾನ ಒಂದೇ ಇರೋದು ದಿನ ನಾಲ್ಕು ಜನ ಮಾತಾಡ್ತಾರೆ. ಜಮೀರ್ ದಿನ ಮಾತಾಡ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಅಶೋಕ್ ತಿರುಗೇಟು ನೀಡಿದ್ದಾರೆ.