ಬೆಳಗಾವಿ: ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ. ದ್ವೇಷ ಇದ್ದರೆ ಚುನಾವಣೆಯಲ್ಲಿ ತೋರಿಸಿ ಎಂದು ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲ್ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಮಣಿಕಂಠ ರಾಥೋಡ್ ಒಂದು ದೂರು ಕೊಟ್ಟಿದ್ದ. ಆತ ಬಿಜೆಪಿ ಅಭ್ಯರ್ಥಿ. ಚಿತ್ತಾಪುರದಿಂದ ಮಾಲಗತ್ತಿಗೆ ರಾತ್ರಿ 1:30 ಕ್ಕೆ ಹೋಗುವಗ ಹಲ್ಲೆ ಮಾಡಿದ್ರು, ನನ್ನ ಜೊತೆ ಶ್ರೀಕಾಂತ್ ಸುಲೇಗಾವ್, ಮಹೇಶ್ ಗೌಳಿ ಇದ್ರು. ಆಲ್ಟ್ರೋಜ್ ಕಾರಿನ ಮೇಲೆ 8 ರಿಂದ 10 ಜನ ಹಲ್ಲೆ ಮಾಡ್ತಾರೆ ಎಂದು ದೂರು ಕೊಟ್ಟಿದ್ದ. ಅಧಿಕಾರಿಗಳು ಮತ್ತು ರಾಜಕೀಯ ವಿರೋಧಿಗಳು ಹಲ್ಲೆ ಮಾಡ್ತಾರೆ ಎಂದು ದೂರಿದ್ದ. ರಾಥೋಡ್ ಮೇಲೆ ಸಾಕಷ್ಟು ಆರೋಪಗಳಿದ್ವು. ಅಕ್ಕಿ ಕಳ್ಳತನದಲ್ಲಿ 22 ಕೇಸ್ ಇದೆ. ಹಾಲಿನ ಪೌಡರ್ ಕಳ್ಳತನದಲ್ಲಿ 1 ಕೇಸ್ ಇತ್ತು. ಮೂರು ಪ್ರಕರಣಗಳಲ್ಲಿ ಈಗಾಗಲೇ ಆರೋಪ ಸಾಬೀತಾಗಿದೆ. ಅದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿರೋದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಇದನ್ನೂ ಓದಿ: ಬೆಳಗ್ಗೆಯಿಂದ ಟೇಕಾಫ್ ಆಗದ ವಿಮಾನ- ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ
Advertisement
Advertisement
ಇಷ್ಟೆಲ್ಲ ಇವನ ಮೇಲೆ ಕೇಸ್ ಇದ್ರೂ ಬಿಜೆಪಿ ಇವನಿಗೆ ಟಿಕೆಟ್ ನೀಡಿತ್ತು. ಇವನು ದೂರು ಕೊಟ್ಟಾಗ ಇಡೀ ಬಿಜೆಪಿ ಇವನ ಹಿಂದೆ ಇತ್ತು. ಕಲಬುರಗಿಯಲ್ಲಿ ಯಾರೂ ಬಿಜೆಪಿ ಮುಖಂಡರು ಉಳಿದಿಲ್ಲ. ಅಲ್ಲಿಗೆ ಎನ್.ರವಿಕುಮಾರ್ ಒಬ್ಬರು ಮಾತ್ರ ಇದ್ದಾರೆ. ಅವರು ಸಹ ಅವತ್ತು ಅವನಿಗೆ ಏನಾದರೂ ಆದ್ರೆ ಪ್ರಿಯಾಂಕಾ ಖರ್ಗೆ ಹೊಣೆ ಅಂತೆಲ್ಲ ಹೇಳಿದ್ರು. ಬರ ವೀಕ್ಷಣೆಗೆ ಬಂದ ವಿಪಕ್ಷ ನಾಯಕ ಅಶೋಕ್ ಸಹ ಮಾತನಾಡ್ತಾರೆ. ಖರ್ಗೆಯವರನ್ನ ಸಂಪುಟದಿಂದ ವಜಾ ಮಾಡಬೇಕು ಅಂತಾರೆ. ಯಂಗ್ ಅಂಡ್ ಡೈನಾಮಿಕ್ ವಿಜಯೇಂದ್ರ ಪ್ರಿಯಾಂಕಾ ಖರ್ಗೆನೇ ಹಲ್ಲೆ ಮಾಡಿದ್ದು ಎಂದು ಹೇಳಿದ್ದಾರೆ. ಅವರು ಮಾಡಿಸಿದ್ದಾರೆ ಅಂತ ಹೇಳುತ್ತಿಲ್ಲ. ಮಾಡಿದ್ದಾರೆ ಅಂತನೇ ಮೈಸೂರಿನಲ್ಲಿ ಹೇಳಿಕೆ ಕೊಡ್ತಾರೆ. ಅವರು 33 ಕೇಸ್ ಇರುವ ಮಣಿಕಂಠ ಪರ ಮಾತನಾಡ್ತಾರೆ. ಇವತ್ತು ಪೊಲೀಸ್ ರಿಪೋರ್ಟ್ ಕೊಡ್ತಾರೆ. ಚಿತ್ತಾಪುರದಲ್ಲಿ ಅವತ್ತು ಇರಲಿಲ್ಲ ಅವರು. ಇದ್ದದ್ದು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ನಲ್ಲಿ. ಅಲ್ಲಿ ಎಲ್ಲೋ ಕುಡಿದುಕೊಂಡು ಬಿದ್ದಿರ್ತಾನೆ. ಗುರುಮಿಟ್ಕಲ್‌ನಿಂದ ಕಲಬುರಗಿಗೆ ಬರುವಾಗ ಚಪೇಟ್ಲದಲ್ಲಿ ಮರಕ್ಕೆ ಗುದ್ದಿದ್ದಾರೆ. ಕಾರಿನಲ್ಲಿ ಬರುವಾಗ ಅಪಘಾತವಾಗಿದೆ ಎಂದು ಅಪಘಾತದ ಫೋಟೋ ಪ್ರದರ್ಶನ ಮಾಡಿದರು.
Advertisement
ಅಪಘಾತವಾಗಿರೋದನ್ನ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ನಾಟಕ ಮಾಡಿದ್ದಾರೆ. ಅಪಘಾತವಾಗಿರುವ ಕಾರನ್ನು ಹೈದರಾಬಾದ್‌ಗೆ ಕಳಿಸುತ್ತಾರೆ. ಹೈದರಾಬಾದ್‌ನ ವರ್ಕ್ಶಾಪ್ ನಲ್ಲಿರುವ ಕಾರಿನ ಫೋಟೋ ಪ್ರದರ್ಶನ ಮಾಡಿದ ಖರ್ಗೆ, ಇದೆಲ್ಲ ನಾನು ಹೇಳುತ್ತಿಲ್ಲ. ಇದು ಫಾರೆನ್ಸಿಕ್ ರಿಪೋರ್ಟ್ ಅವರು ಹೇಳಿದ್ದ ಕಾರಿನಲ್ಲಿ ಒಂದೇ ಒಂದು ತೊಟ್ಟು ರಕ್ತ ಬಿದ್ದಿಲ್ಲ. ಅವರೇ ಕಲ್ಲಿನಲ್ಲಿ ಹೊಡೆದುಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಿಂದ ಸೋನಿಯಾ ಗಾಂಧಿ ಸಂಸತ್ತಿಗೆ! – ಹೈಕಮಾಂಡ್ ಮುಂದೆ ಡಿಕೆಶಿ ಪ್ರಸ್ತಾಪ
Advertisement
ಮಣಿಕಂಠ ಹಾಗೂ ಬಿಜೆಪಿ ನಾಯಕರ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹೊಡುತ್ತೇನೆ. ಇಲ್ಲಿಯವರೆಗೆ ನಾನು ತಾಳಿಕೊಂಡಿದ್ದೇನೆ. ನಮ್ಮ ತಾಳ್ಮೆಯನ್ನ ಪರೀಕ್ಷಿಸಬೇಡಿ. ನಾವು ಸಮಯ ವ್ಯರ್ಥ ಮಾಡುವುದಿಲ್ಲ. ಅಂಬೇಡ್ಕರ್ ಹೋರಾಟ ಕಿಚ್ಚು ನನ್ನಲ್ಲಿದೆ. ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡ್ತೀರಾ? ಇನ್ಮೇಲೆ ಇಂತಹ ಡ್ರಾಮಾಗಳನ್ನ ನಿಲ್ಲಿಸಿ ಎಂದು ಹರಿಹಾಯ್ದರು.
ಇದೇ ರಾಥೋಡ್ ನನ್ನ ಶೂಟ್ ಮಾಡ್ತೀವಿ ಎಂದಿದ್ದ. ಖರ್ಗೆ ಕುಟುಂಬ ಫಿನಿಶ್ ಮಾಡ್ತೇವೆ ಎಂದಿದ್ದ. ಆಗ ಎಲ್ಲಿ ಹೋಗಿತ್ತು ನಿಮ್ಮ ಮನುಷ್ಯತ್ವ? ಹೇಳಿಕೆ ಕೊಡುವಾಗ ಸರಿಯಾಗಿ ಮಾತನಾಡಿ, ಇಲ್ಲವಾದರೆ ಕೋರ್ಟ್ಗೆ ಹೋಗಬೇಕಾಗುತ್ತೆ. ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ? ದ್ವೇಷ ಇದ್ದರೆ ಚುನಾವಣೆಯಲ್ಲಿ ತೋರಿಸಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸಂತರನ್ನು ಸಮಭಾವದಿಂದ ನೋಡುವವರು ಟೆರರಿಸ್ಟಾ?: ಹೆಚ್‌ಕೆ ಪಾಟೀಲ್