ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ (B.Y.Vijayendra) ಆಯ್ಕೆ ಮಾಡಿರುವುದು ಕುಟುಂಬ ರಾಜಕಾರಣ ಅಲ್ವಾ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇದು ಬಿ.ಎಲ್.ಸಂತೋಷ್ ಅವರಿಗೆ ಸ್ಪಷ್ಟ ಸಂದೇಶ. ಸಂತೋಷ್ ಅವರೆ ನಿಮ್ಮ ತಂತ್ರಗಾರಿಕೆಯಿಂದ ನಮಗೆ ಸಂತೋಷ ಆಗಿಲ್ಲ. ಯಡಿಯೂರಪ್ಪ ಅವರಿಗೆ ಪ್ರಮುಖ ಸ್ಥಾನ ಕೊಡ್ತಾ ಇದ್ದೇವೆ. ನೀವು ಏನಿದ್ದರು ಕೇಶವ ಕೃಪದಲ್ಲಿ ಇರಿ ಎಂಬ ಸಂದೇಶ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಆಯ್ಕೆ ‘ಹೊಸ ಬಾಟಲಿಗೆ ಹಳೆ ವೈನ್’ ಹಾಕಿದಂತೆ: ಡಿ.ಸುಧಾಕರ್
Advertisement
Advertisement
ವೈಯಕ್ತಿಕವಾಗಿ ನಾನು ಟೀಕೆ ಮಾಡಲ್ಲ. ವಿಜಯೇಂದ್ರ ನನಗಿಂತ ನಾಲ್ಕೈದು ವರ್ಷ ದೊಡ್ಡವರು. ಅವರಿಗೆ ಒಳ್ಳಯದಾಗಲಿ. ಬಿಜೆಪಿ ಇಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕೆ ಜೀವ ತುಂಬುವ ಶಕ್ತಿ ಅವರಿಗೆ ಕೊಡಲಿ. ಆದರೆ ಸರ್ಜಿಕಲ್ ಸ್ಟ್ರೈಕ್ ಯಾಕೆಂದರೆ, ಸೋಮಣ್ಣ, ಸಿ.ಟಿ.ರವಿ ಟ್ರೈ ಮಾಡ್ತಾ ಇದ್ದರು. ಯಡಿಯೂರಪ್ಪ ರಾಜೀನಾಮೆಗೆ ಅವರ ಸುಪುತ್ರರು ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದರು ಎಂದು ತಿರುಗೇಟು ನೀಡಿದ್ದಾರೆ.
Advertisement
ಕುಟುಂಬ ರಾಜಕಾರಣ, ಓಲೈಕೆ ರಾಜಕಾರಣ, ಭ್ರಷ್ಟಾಚಾರ ತೊಲಗಿಸಬೇಕು ಎಂದು ಮೋದಿ ಭಾಷಣ ಮಾಡುತ್ತಾರೆ. ದೇಶದ ಕೆಂಪು ಕೋಟೆ ಮೇಲೆ ನಿಂತು ಭಾಷಣ ಮಾಡುತ್ತಿದ್ದರು. ಕರ್ನಾಟಕದಲ್ಲಿ ಲಿಂಗಾಯತರಿಗೆ ಮಾನ್ಯತೆ ಕೊಡಬೇಕು ಎಂದು ಮಾಡಿದ್ದಾರೆ. ಇದು ಓಲೈಕೆ ರಾಜಕಾರಣ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಆಯ್ಕೆಯಿಂದ ಆಕಾಂಕ್ಷಿಗಳಿಗೆ ನಿರಾಸೆ ಸಹಜ: ಶ್ರೀರಾಮುಲು
Advertisement
ಭ್ರಷ್ಟಾಚಾರ ತಡೆ ಹಿಡಿಯಬೇಕು ಎಂದು ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ರು. ಯಡಿಯೂರಪ್ಪ ಸಾಹೇಬರನ್ನ ಕಣ್ಣೀರು ಹಾಕಿಸಿ ಕೆಳಗಿಳಿಸಿದ್ರು. ಇವರ ಮೇಲೂ ಲೋಕಾಯುಕ್ತ ಕೇಸ್ ಮಾಡಿದ್ರು. ನಾವು ಏನೇ ಮಾಡಿದ್ರು ಇವರು ಖರ್ಗೆ ಮಗ ಅಂತಾರೆ. ನಾನು ಯೂತ್ ಕಾಂಗ್ರೆಸ್ ಕೆಲಸ ಮಾಡಿದ್ದು, ಶಾಸಕನಾಗಿ ಕೆಲಸ ಮಾಡಿದ್ದು ನೋಡಲ್ಲ. ಆದರೂ ನಾವು ಬಂದಾಗ, ಕುಟುಂಬ ರಾಜಕಾರಣ ಅಂದರು. ಮೋದಿ, ಅಮಿತ್ ಶಾ ಮಾತು ಏನಾಯಿತು. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಬಿಜೆಪಿ ನಾಯಕರು ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಮುಗಿಸಬೇಕೆಂದು ಮಾಡಿದಂಗಿದೆ. ಸದಾನಂದಗೌಡರು ಸೇರಿದಂತೆ ಬೇರೆ ನಾಯಕರು ಸ್ವಯಂ ನಿವೃತಿ ಪಡೆದಿದ್ದಾರೆ. ಇದು ಒತ್ತಾಯದ ಸ್ವಯಂ ನಿವೃತ್ತಿ ಆಗಿದೆ. ಮಾನಸಿಕವಾಗಿ, ದೈಹಿಕವಾಗಿ ಫೀಟ್ ಇದ್ದಾರೆ. ಆದರೂ ನಿವೃತ್ತಿ ಕೊಡಿಸಿದ್ದಾರೆ. ನೊಂದು ಪಕ್ಷವನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್ ಶಾರಿಂದ ಸೂಕ್ತ ಸಮಯಕ್ಕೆ ಉತ್ತಮ ನಿರ್ಧಾರ: ಯಡಿಯೂರಪ್ಪ
ಮಾಜಿ ಸಿಎಂ, ಕೇಂದ್ರ ಮಂತ್ರಿ ದೆಹಲಿಗೆ ಹೋದರೂ ಬಾಗಿಲು ತೆಗೆದಿಲ್ಲ. ಬಿಜೆಪಿ ವರ್ಸಸ್ ಬಿಜೆಪಿ ಆಗಿದೆ. ಬಿಜೆಪಿ ಪಕ್ಷ ಬಿಟ್ಟು ಎಷ್ಟು ಜನ ಬರ್ತಾರೆ ನೀವೆ ನೋಡಿ. ಬೂತ್ ಮಟ್ಟ, ಸಂಘದಲ್ಲಿ ಕೆಲಸ ಮಾಡಿದ್ದೇನೆ. ಸಚಿವನಾಗಿದ್ದೆ… ನಾನು ಏನು ಮಾತಾಡಿದರೂ ತಿರುಗುಬಾಣ ಆಗಲಿದೆ. ಈಶ್ವರಪ್ಪ ಎಲ್ಲಿಗೆ ಹೋದರು? ಈಶ್ವರಪ್ಪ, ನನಗೆ ಬಚ್ಚಾ ಎನ್ನುತ್ತಿದ್ದರು. ಈಗ ಹೋಗಿ ಮಂಡಿ ಊರುತ್ತೀರಾ? ಈಗ ಈಶ್ವರಪ್ಪ ಪಕ್ಷ ಬಿಡ್ತಾರಾ? ಮೊದಲು ಅವರ ಮನೆಯನ್ನ ನೋಡಿಕೊಳ್ಳಲಿ. ಅವರಿಗೂ ಟಿಕೆಟ್ ಸಿಗಲಿಲ್ಲ. ಅವರ ಮಗನಿಗೂ ಆಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಲೆಕ್ಕಾಚಾರ ಏನು ಎಂದು ಅವರಿಗೆ ಬಿಟ್ಟಿದ್ದು. ನಾವು ನಮ್ಮ ಬಲದ ಮೇಲೆ ತಂತ್ರಗಾರಿಕೆ ಮಾಡ್ತೇವೆ. ಸಮುದಾಯ ಬೆಂಬಲ ಇಲ್ಲ ಎಂದು ಒಪ್ಪಿಕೊಂಡಂಗೆ ಅಲ್ವ ಎಂದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಪಕ್ಷದ ಸಾರಥ್ಯ – ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ ಮೌನ