ಬೆಂಗಳೂರು: ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ (Reservation For Kannadigas) ಕಲ್ಪಿಸುವ ವಿಚಾರದಲ್ಲಿ ಎಲ್ಲಾ ಸಾಧಕ ಬಾಧಕಗಳನ್ನ ನೋಡಿ ತೀರ್ಮಾನ ಮಾಡುತ್ತೇವೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.
ಬೆಂಗಳೂರಿನಲ್ಲಿಂದು (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ. ಬಂಡವಾಳ ಹೂಡಿಕೆಗೆ ನಷ್ಟವಾಗಬಾರದು. ಉದ್ಯೋಗ ಸೃಷ್ಟಿಗೂ ನಷ್ಟವಾಗಬಾರದು. ಆ ರೀತಿಯಲ್ಲಿ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ; ಎಕ್ಸ್‌ನಲ್ಲಿ ಪೋಸ್ಟ್ ಡಿಲೀಟ್ ಮಾಡಿದ ಸಿಎಂ
ಇದು ಕಾರ್ಮಿಕ ಇಲಾಖೆಯಿಂದ ಬಂದಿರುವ ಪ್ರಸ್ತಾವನೆ. ಫಿನ್ ಟೆಕ್, ಎಐ (Fintech And AI) ಇದೆಲ್ಲದಕ್ಕೂ ನಿರ್ದಿಷ್ಟವಾದ ಕೌಶಲ್ಯ ಬೇಕಾಗುತ್ತೆ. ಕನ್ನಡಿಗರು ಕರ್ನಾಟಕಕ್ಕೆ ಸೀಮಿತವಾಗಿಲ್ಲ, ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಇದ್ದಾರೆ. ಅದಕ್ಕೆ ತಕ್ಕಂತೆ ಕೌಶಲ್ಯತೆ ನೀಡಬೇಕಿದೆ. ಎಲ್ಲಾ ನೀತಿಗಳಿಗೂ ಪರ, ವಿರೋಧ ಇದ್ದೇ ಇರುತ್ತೆ. ಕೆಲವರು ಐಟಿ-ಬಿಟಿಗೆ ಯಾಕೆ ಅಷ್ಟೊಂದು ರಿಯಾಯಿತಿ ಕೊಡ್ತೀರಿ? ಅಂತ ಕೇಳಿದರು. ಇವತ್ತು ಎಷ್ಟು ಜನಕ್ಕೆ ಉದ್ಯೋಗ ಸಿಕ್ಕಿಲ್ಲ ಹೇಳಿ? ಎಂದು ಪ್ರಶ್ನಿಸಿದರು.
ಕನ್ನಡಿಗರಿಗೆ ಮೀಸಲಾತಿ ವಿಚಾರದಲ್ಲಿ ಉದ್ಯಮಿಗಳ ಜೊತೆಗೂ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ; ವಿಧಾನಸಭೆ ಅಧಿವೇಶನದಲ್ಲಿ ಬಿಲ್ ಮಂಡನೆಗೆ ಗ್ರೀನ್ ಸಿಗ್ನಲ್
ಅಲ್ಲದೇ ಮೋಹನ್ ದಾಸ್ ಪೈ ಅವರಿಂದ ಕರ್ನಾಟಕ ಭ್ರಷ್ಟ ರಾಜ್ಯ ಎಂಬ ಆರೋಪ ವಿಚಾರ. ಅವರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಇದು ಅವರ ಅನುಭವದ ಮಾತೋ, ಗಾಳಿಯಲ್ಲಿ ಗುಂಡು ಹೊಡೆದಿದ್ದಾರೋ ಗೊತ್ತಿಲ್ಲ. ಎಲ್ಲಿ ಭ್ರಷ್ಟಾಚಾರ ನಡೆದಿದೆ? ಅನ್ನೋದನ್ನ ಹೇಳಲಿ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಿನಿ ನಿರ್ದೇಶಕ ಗಜೇಂದ್ರ ಕೊಲೆ ಕೇಸ್‌ನಲ್ಲಿ ಅರೆಸ್ಟ್!