ಕಲಬುರಗಿ: ಕಲಬುರಗಿ (Kalaburagi) ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ (Banner) ಹಾಕಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಪಾಲಿಕೆಯಿಂದ 5,000 ರೂ. ದಂಡ ವಿಧಿಸಲಾಗಿದೆ.
Advertisement
ಕಲಬುರಗಿ ನಗರದ ಹೊರವಲಯದ ಬಂಗರಗಾ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿದ್ದ ಸಂದರ್ಭದಲ್ಲಿ ಖರ್ಗೆ ಬೆಂಬಲಿಗರು ಸ್ವಾಗತ ಕೋರುವ ಹಿನ್ನೆಲೆಯಲ್ಲಿ ಬ್ಯಾನರ್ ಹಾಕಿದ್ದರು. ಇದನ್ನೂ ಓದಿ: ಬಿಜೆಪಿ ಅವರದ್ದು ಬಿಚ್ಚೋ ಕಾಲ ಬರುತ್ತೆ, ಬಿಚ್ತೀನಿ: ಡಿಕೆಶಿ ತಿರುಗೇಟು
Advertisement
Advertisement
ಸಚಿವರು ಸದರಿ ವಿಷಯವನ್ನು ಮನಗಂಡು, ಪಾಲಿಕೆಯ ಕ್ರಮವನ್ನು ಬೆಂಬಲಿಸಿ, ದಂಡದ ಮೊತ್ತವನ್ನು ಪಾವತಿಸಲು ಸಮ್ಮತಿ ಸೂಚಿಸಿದ್ದಾರೆ.
Advertisement
Web Stories