– ಕ್ರಿಮಿನಲ್ ಕೆಲ್ಸ ಮಾಡಿ ಜೈಶ್ರೀರಾಮ್ ಅಂದ್ರೆ ಎಲ್ಲವೂ ಮುಚ್ಚಿ ಹೋಗುತ್ತಾ? ಎಂದು ಲೇವಡಿ
ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಮೊದಲು ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಪಕ್ಷದಿಂದ ಉಚ್ಚಾಟಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಎರಡು ಬಣಗಳ ಮಧ್ಯೆ ಫೈಟ್ ನಡೆದಿದೆ. ಮೇಲಾಗಿ ಬಿಜೆಪಿ ಕಾರ್ಯಕರ್ತರೇ (BJP Workers) ಯತ್ನಾಳ್ ಅರೆಹುಚ್ಚ ಅಂದಿದ್ದಾರೆ. ಇಷ್ಟಾದರೂ ಅವರನ್ನ ಏಕೆ ಪಕ್ಷದಿಂದ ಉಚ್ಚಾಟಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 93 ವರ್ಷದ ಅಜ್ಜಿಗೆ ಪರೋಲ್ – ಜೈಲಲ್ಲಿ ಅಜ್ಜಿಯ ಪರಿಸ್ಥಿತಿ ಕಂಡು ಮರುಗಿದ್ದ ಉಪಲೋಕಾಯುಕ್ತ
ಇದೇ ವೇಳೆ ಮುಸ್ಲಿಮರಿಗೆ (Muslims) ಮತದಾನದ ಹಕ್ಕಿಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದರು. ಸ್ವಾಮೀಜಿ ಆದ ತಕ್ಷಣ ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವಾ ಮಿಸ್ಟರ್ ಅಶೋಕ್? ತಮ್ಮ ಹೇಳಿಕೆಗೆ ಕುರಿತು ಖುದ್ದು ಸ್ವಾಮೀಜಿಯವರೇ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಸ್ವಾಮೀಜಿಯವರ ಹೇಳಿಕೆಯನ್ನ ಬಿಜೆಪಿ ಸಮರ್ಥನೆ ಮಾಡುತ್ತಿದೆ. ಕಾನೂನು ಅಂದ್ರೆ ನಮಗೇ ಬೇರೆ, ನಿಮಗೇ ಬೇರೆನಾ? ಎಂದು ಕಿಡಿಕಾರಿದರು.
ಯತ್ನಾಳ್ ಬಸವಣ್ಣ ಅವರನ್ನ ಹೇಡಿ ಎನ್ನುತ್ತಾರೆ. ಇದಕ್ಕೆ ಬಿಜೆಪಿಯ ಒಬ್ಬರೂ ಈವರೆಗೆ ತುಟಿ ಬಿಚ್ಚಿಲ್ಲ. ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದಾಗ್ಯೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಬಸವಣ್ಣ ಅಂದ್ರೆ ನಿಮಗೆ ಅಷ್ಟೊಂದು ಅಲರ್ಜಿನಾ? ಕ್ರಿಮಿನಲ್ ಕೆಲಸ ಮಾಡಿ ಜೈಶ್ರೀರಾಮ್ ಅಂದ್ರೆ ಎಲ್ಲವೂ ಮುಚ್ಚಿ ಹೋಗುತ್ತಾ? ಲೇವಡಿ ಮಾಡಿದರು. ಇದನ್ನೂ ಓದಿ: ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಎಂಎಲ್‌ಸಿ
ಸಂಪುಟ ಪುನಾರಚನೆ ಇಲ್ಲ:
ರಾಜ್ಯ ಸಚಿವ ಸಂಪುಟದ ಪುನಾರಚನೆ ಸದ್ಯಕ್ಕೆ ಮಾಡುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ದೆಹಲಿಗೆ ಹೋಗಿರಲಿಲ್ಲ. ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ನೂತನ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಲು ತೆರಳಿದ್ದರು. ಈ ವೇಳೆ ಮುಖ್ಯಮಂತ್ರಿಗಳು ಎಐಸಿಸಿ ಅಧ್ಯಕ್ಷರನ್ನು ಸಹಜವಾಗಿ ಭೇಟಿ ಮಾಡಿದ್ದಾರೆ ಅಷ್ಟೇ ಎಂದು ವಿವರಿಸಿದರು.
ವಿಕಲಚೇತನರ ಅನುದಾನ ಕಡಿತ ಆಗಿಲ್ಲ:
ಇದೇ ವೇಳೆ ವಿಶೇಷ ಚೇತನರ ಅನುದಾನ ಕಡಿತ ಆರೋಪಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಅಂಗವಿಕಲರ ಅನುದಾನದಲ್ಲಿ ಶೇ.80ರಷ್ಟು ಕಡಿತ ಮಾಡಲಾಗಿದೆ ಎಂಬುದು ಸುಳ್ಳು. ಯಾವುದೇ ಅನುದಾನ ಕಡಿತ ಮಾಡಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅನುದಾನ ಹೆಚ್ಚಿಸಲಾಗಿದೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೀಡಿದ ಕ್ರಿಯಾಯೋಜನೆ ಆಧರಿಸಿ ಅನುದಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಮದುವೆಗಳಿಗೆ ಹೋಗ್ತಿನಿ – ಚಂದ್ರಶೇಖರ ಸ್ವಾಮೀಜಿ ಯೂಟರ್ನ್