ಕಲಬುರಗಿ: ಜಿಲ್ಲೆಯಲ್ಲಿ ಬೆಳೆಯಲಾದ ತೊಗರಿ ಆರೋಗ್ಯದ ಕುರಿತ ಕೃಷಿ ವಿಜ್ಞಾನಿ ಮತ್ತು ಅಧಿಕಾರಿಗಳು ಕ್ಷಿಪ್ರ ಸಂಚಾರ ಸಮೀಕ್ಷೆ ಕೈಗೊಂಡು ರೈತರಿಗೆ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡುವ ಸಮೀಕ್ಷೆ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಚಾಲನೆ ನೀಡಿದರು.
ಡಿ.ಸಿ.ಕಚೇರಿ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತಾಲೂಕುವಾರು ಹಂಚಿಕೆಯಾದ ಕೃಷಿ ವಾಹನಗಳಿಗೆ ಸಚಿವರು ಮತ್ತು ಗಣ್ಯರು ಚಾಲನೆ ನೀಡಿದರು. ಇದನ್ನೂ ಓದಿ: ಭಾರತದ ಭೂಮಿಯ ಮೇಲೆ ಒಂದಿಂಚೂ ಕಾಂಪ್ರಮೈಸ್ ಮಾಡಲ್ಲ: ಮೋದಿ ಭರವಸೆ
Advertisement
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಈ ಸಂದರ್ಭದಲ್ಲಿ ಮಾತನಾಡಿ, ಕಲಬುರಗಿ (Kalaburagi) ಜಿಲ್ಲೆಯಲ್ಲಿ ಸುಮಾರು 30 ವರ್ಷಗಳಿಂದ ಕ್ಷಿಪ್ರ ಸಂಚಾರಿ ಸಮೀಕ್ಷೆ ಮಾಡುವ ಮೂಲಕ ತೊಗರಿ ಆರೋಗ್ಯದ ಬಗ್ಗೆ ರೈತರಿಗೆ ಪ್ರತಿ ವಾರ ಮಾಹಿತಿ ನೀಡುತ್ತಿದ್ದು, ಇದರಿಂದ ರೈತರಿಗೆ ಕಾಲಕಾಲಕ್ಕೆ ತೊಗರಿ ಬೆಳೆಗೆ ಬರುವ ಸಂಭವನೀಯ ರೋಗ ಮತ್ತು ಬಾಧೆಗಳ ನಿರ್ವಹಣೆಗೆ ಅನುಕೂಲವಾಗುತ್ತಿದೆ ಎಂದರು. ಇದನ್ನೂ ಓದಿ: ಶಕ್ತಿ ಯೋಜನೆ ನಿಲ್ಲಿಸಲು ಸರ್ಕಾರದ ಹುನ್ನಾರ, ಮರು ಪರಿಶೀಲನೆ ಎಂಬುದು ನಾಟಕ: ಹೆಚ್‌ಡಿಕೆ
Advertisement
Advertisement
ಪ್ರಸಕ್ತ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ, ಕಬ್ಬು ಹಾಗೂ ಹತ್ತಿಯನ್ನು ಕ್ರಮವಾಗಿ 6.06, 0.49 ಹಾಗೂ 1.06 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಇನ್ನು ಹಿಂಗಾರು ಹಂಗಾಮಿನಲ್ಲಿ ಕಡಲೆ ಮತ್ತು ಜೋಳ ಕ್ರಮವಾಗಿ 1.10 ಮತ್ತು 0.77 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕುತಂತ್ರದಿಂದ ನಾನು ಎರಡು ಬಾರಿ ಸೋತಿದ್ದೇನೆ: ಭಾಷಣದ ವೇಳೆ ನಿಖಿಲ್ ಕಣ್ಣೀರು
Advertisement
ಕೃಷಿ ಇಲಾಖೆಯು ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ತಾಲೂಕಿಗೆ ಒಂದರಂತೆ ತಂಡಗಳನ್ನು ರಚಿಸಿದ್ದು, ಮುಂಗಾರು ಮತ್ತು ಹಿಂಗಾರು ಹಂಗಾಮಿನ ತಾಲೂಕುಗಳಿಗೆ ಸಾಪ್ತಾಹಿಕವಾಗಿ 8 ವಾರಗಳ ಕಾಲ ಸತತ ಭೇಟಿ ನೀಡಿ ಬೆಳೆಗಳ ಬೆಳವಣಿಗೆ, ಅವುಗಳಲ್ಲಿರುವ ರೋಗ ಮತ್ತು ಬಾಧೆಗಳನ್ನು ಗುರುತಿಸುವುದು. ಹಾಗೆಯೇ ಅವಶ್ಯಕವಿರುವ ನಿಯಂತ್ರಣ ಮಾಹಿತಿಗಳನ್ನು ತಿಳಿದುಕೊಂಡು, ತಾಂತ್ರಿಕವಾಗಿ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಧ್ಯಮದ ಮೂಲಕ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಇದರಿಂದ ರೈತರಿಗೆ ರೋಗ ಮತ್ತು ಕೀಟನಾಶಕ ಸಿಂಪಡಣೆಯಲ್ಲಿ ವೆಚ್ಚ ಕಡಿಮೆಯಾಗಲಿದೆ. ಇದನ್ನೂ ಓದಿ: ಸೇನಾ ವಾಪಸಾತಿ ಬಳಿಕ ಗಡಿಯಲ್ಲಿ ದೀಪಾವಳಿ ಸಿಹಿ ಹಂಚಿಕೊಂಡ ಭಾರತ-ಚೀನಾ ಸೈನಿಕರು
ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಉಪಸ್ಥಿತರಿದ್ದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಕೊಡಲು ಆಗದ ಕಾಂಗ್ರೆಸ್ ಸರ್ಕಾರ ಯೂಟರ್ನ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ