ಬೆಂಗಳೂರು: ಉಪಚುನಾವಣೆಯ ಫಲಿತಾಂಶ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಹೊಸ ಲೆಕ್ಕಾಚಾರವೊಂದು ಶುರುವಾಗಿದೆ. ಉಗ್ರಪ್ಪರನ್ನು ಲೀಡ್ ಕೊಟ್ಟು ಗೆಲ್ಲಿಸಿದ್ದ ಕಾಂಗ್ರೆಸ್ ಶಾಸಕರ ಕನಸು ಚಿಗುರಿದೆ.
ಉಗ್ರಪ್ಪರನ್ನ ಗೆಲ್ಲಿಸಿದ ಬಳ್ಳಾರಿಯ 6 ಜನ ಕಾಂಗ್ರೆಸ್ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ…? ಯಾರಾಗಲಿದ್ದಾರೆ ಬಳ್ಳಾರಿ ಕೋಟೆಯ ಸಾಮ್ರಾಟ ಅನ್ನೋ ಕುತೂಹಲ ಮತ್ತೆ ಮೂಡಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಸೋಲಿನ ಆತಂಕದಲ್ಲಿದ್ದ ಸಿದ್ದರಾಮಯ್ಯ, ಎಲ್ಲಾ ಶಾಸಕರನ್ನು ಕರೆದು ಯಾರು ಹೆಚ್ಚು ಲೀಡ್ ಕೊಡ್ತಾರೋ ಅವರ ಹೆಸರು ಮಂತ್ರಿ ಸ್ಥಾನಕ್ಕೆ ಪರಿಗಣಿಸುವುದಾಗಿ ಟಾಸ್ಕ್ ನೀಡಿದ್ದರು. ಹೀಗಾಗಿ ಮಂತ್ರಿ ಸ್ಥಾನದ ಹಟಕ್ಕೆ ಬಿದ್ದು 6 ಮಂದಿ ಶಾಸಕರು ತಲಾ 30 ಸಾವಿರ ಲೀಡ್ ಕೊಟ್ಟರು. ಈಗ ಮಂತ್ರಿಗಿರಿ ಯಾರಿಗೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಸ್ಥಾನದ ಆ ಆರು ಆಕಾಂಕ್ಷಿಗಳು ಯಾರು..?
* ಸಂಡೂರಿನ ತುಕಾರಾಂ ಅವರು ಮೂರನೇ ಬಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಇವರು ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಮಂತ್ರಿ ಸ್ಥಾನದ ಡಾರ್ಕ್ ಹಾರ್ಸ್ ಆಗಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ತುಕಾರಾಂ ಮೇಲೆ ಮಂತ್ರಿ ಸ್ಥಾನದ ಒಲವು ಹೆಚ್ಚಿದೆ.
* ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರು 30 ಸಾವಿರದಷ್ಟು ಲೀಡ್ ತಂದುಕೊಟ್ಟಿದ್ದಾರೆ. ಇವರು ಸತತವಾಗಿ 4 ಬಾರಿ ಗೆದ್ದಿದ್ದು ಕಳೆದ ಬಾರಿ ಸಚಿವರಾಗಿದ್ದವರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಮೂರೂವರೆ ವರ್ಷ ಸಚಿವರಾಗಿದ್ದರು. ಇದೀಗ ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
* ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾಗಿರೋ ಭೀಮಾ ನಾಯಕ್ ಅವರು 2ನೇ ಬಾರಿಗೆ ಶಾಸಕರಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಟಾರ್ಗೆಟನ್ನು ಬಳ್ಳಾರಿ ಶಾಸಕರು ರೀಚ್ ಮಾಡಿದ್ರಾ? ಯಾವ ಶಾಸಕರ ಕ್ಷೇತ್ರದಲ್ಲಿ ಎಷ್ಟು ಲೀಡ್?
* ಬಳ್ಳಾರಿ ಗ್ರಾಮೀಣ ಭಾಗದ ಶಾಸಕರಾಗಿರುವ ನಾಗೇಂದ್ರ ಕೂಡ ಇದೀಗ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರು 3 ನೇ ಬಾರಿ ಶಾಸಕರಾಗಿದ್ದಾರೆ.
* ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರು ಈ ಹಿಂದೆ ಹಲವು ಬಾರಿ ತನಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದ್ದರು.
* ಕಂಪ್ಲಿ ಶಾಸಕ ಗಣೇಶ್ ಅವರು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿದ್ದರೂ ಕೂಡ ಸಚಿವ ಸ್ಥಾನ ನೀಡಬೇಕೆಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ: ವಿ.ಎಸ್ ಉಗ್ರಪ್ಪ
ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರಿಗೆ ಈ ತಿಂಗಳ 12ರ ನಂತರ ಬಂಪರ್ ಗಿಫ್ಟ್ ಸಿಗೋದು ಗ್ಯಾರಂಟಿಯಾಗಿದೆ. ಸಂಪುಟ ವಿಸ್ತರಣೆಗೆ ನವಂಬರ್ 12ರ ನಂತರ ಮುಹೂರ್ತ ಫಿಕ್ಸ್ ಆಗಿದ್ದು, ಕಾಂಗ್ರೆಸ್-ಜೆಡಿಎಸ್ ಹೈಕಮಾಂಡ್ ಮಾತುಕತೆ ಪ್ರಕಾರ ನವೆಂಬರ್ 12 ರ ನಂತರ ಸಂಪುಟ ವಿಸ್ತರಣೆ ನಡೆಯಲಿದೆ.
ಚುನಾವಣಾ ಫಲಿತಾಂಶ ದಿನದಂದೇ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ದೇವೇಗೌಡರನ್ನ ಭೇಟಿಯಾಗಿದ್ದರು. ಈ ವೇಳೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿಗೆ ದೇವೇಗೌಡರು ಸೂಚನೆ ನೀಡಿದ್ದಾರೆ. ಅಲ್ಲದೇ ಈ ಕುರಿತು ವೇಣುಗೋಪಾಲ್ ಅವರು ನವೆಂಬರ್ 9 ರಂದು ರಾಹುಲ್ ಗಾಂಧಿ ಜೊತೆ ಸಹ ದೂರವಾಣಿಯಲ್ಲಿ ದೂರವಾಣಿಯಲ್ಲಿ ಚರ್ಚೆ ನಡೆಸಲಿದ್ದಾರೆ. ನವೆಂಬರ್ 09, 10ರಂದು ಕಾಂಗ್ರೆಸ್, ಜೆಡಿಎಸ್ ನಾಯಕರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ. ನ.11ರ ಹೈಕಮಾಂಡ್‍ಗೆ ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮ ಪಟ್ಟಿ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಸೋಲು ಅನಾಥ, ನಾನೇ ಬಳ್ಳಾರಿ ಸೋಲಿನ ಹೊಣೆ ಹೊರುತ್ತೇನೆ: ಶ್ರೀರಾಮುಲು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv