– ಸಿಎಂ, ಡಿಸಿಎಂ ವಿರುದ್ಧ ಕಿಡಿಕಾರಿದ ಸಚಿವ
ಬೆಂಗಳೂರು: ಪವರ್ ಶೇರಿಂಗ್ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಶಿವಕುಮಾರ್ (D.K.Shivakumar) ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ (G.Parameshwar) ಕಿಡಿಕಾರಿದ್ದಾರೆ. ಈ ಮೂಲಕ ನಾನು ಕೂಡಾ ಸಿಎಂ ರೇಸ್‌ನಲ್ಲಿ ಇದ್ದೇನೆ ಅಂತ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ್ದಾರೆ.
ಪವರ್ ಶೇರಿಂಗ್ ಬಗ್ಗೆ ಸಿಎಂ, ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಸಿಎಂ ಸ್ಥಾನ ಹಂಚಿಕೆ ವಿಚಾರದಲ್ಲಿ ಯಾವುದೇ ಒಪ್ಪಂದಗಳು ಆಗಿಲ್ಲ. ಒಪ್ಪಂದ ಆಗಿರೋ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾನು ದೆಹಲಿಯಲ್ಲಿರೋರಿಗೂ ಕೇಳಿದೆ, ಇಲ್ಲಿ ಇರೋರಿಗೂ ಕೇಳಿದೆ ಒಪ್ಪಂದ ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಹೇಳಿದ್ದೇ ಫೈನಲ್, ಯಾವುದೇ ತಕರಾರು ಇಲ್ಲ: ಡಿಕೆಶಿ
ಡಿಕೆ ಶಿವಕುಮಾರ್ ಏನ್ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ನನಗೆ. ಅದಕ್ಕೆ ಸಿದ್ದರಾಮಯ್ಯ ಅವರು ಅಂತಹ ಒಪ್ಪಂದ ಆಗಿಲ್ಲ ಅಂತ ಹೇಳಿದ್ದಾರೆ. ಸಿಎಂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಒಪ್ಪಂದ ಆಗಿದ ಅಂದರೆ ಮತ್ತೆ ನಾವೆಲ್ಲ ಯಾಕೆ ಇರಬೇಕು? ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ಎಲ್ಲಾ ನಡೆಸಿಬಿಡಲಿ. ಬೇರೆ ಯಾರು ಇರೋದೇ ಬೇಡಬಾ ಎಂದು ಸಿಎಂ, ಡಿಸಿಎಂ ನಡೆಗೆ ಕಿಡಿಕಾರಿದರು.
ಆ ರೀತಿ ನಮ್ಮ ಪಕ್ಷದಲ್ಲಿ ಆಗೋಕೆ ಸಾಧ್ಯವಿಲ್ಲ. ಹೈಕಮಾಂಡ್ ಏನು ಅಂತಿಮವಾಗಿ ತೀರ್ಮಾನ ಮಾಡ್ತಾರೆ ಅದೇ ಫೈನಲ್. ನಾವು ಯಾರು ಹೈಕಮಾಂಡ್ ಬಿಟ್ಟು ಹೋಗೋರಲ್ಲ. ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೊ ಅದನ್ನ ಒಪ್ಪಿಕೊಳ್ಳೋ ಜನ ನಾವು. ಈ ಒಪ್ಪಂದ-ಗಿಪ್ಪಂದ ನಮಗೆಲ್ಲ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪವರ್ ಶೇರಿಂಗ್: ಡಿಕೆಶಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸ್ಪಷ್ಟನೆ