ಮುಂಬೈ: ನನಗೆ ಆಗಾಗ್ಗೆ ರಾಜಕೀಯ ತೊರೆಯಬೇಕು ಅನ್ನಿಸುತ್ತದೆ. ಬಹಳಷ್ಟು ಬಾರಿ ಈ ಬಗ್ಗೆ ಯೋಚಿಸಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Advertisement
ಮಹಾರಾಷ್ಟçದ ನಾಗ್ಪುರದಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಗಾಂಧಿ ಅವರ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಆಗಾಗ ರಾಜಕೀಯ ತೊರೆಯಬೇಕು ಅನ್ನಿಸುತ್ತದೆ. ರಾಜಕೀಯ ತ್ಯಜಿಸುವ ಬಗ್ಗೆ ಬಹಳಷ್ಟು ಬಾರಿ ಯೋಚಿಸಿಯೂ ಇದ್ದೇನೆ. ಏಕೆಂದರೆ ರಾಜಕೀಯಕ್ಕಿಂತ ಜೀವನದಲ್ಲಿ ಹೆಚ್ಚಿನದ್ದನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೀವ ಬೆದರಿಕೆ ಆತಂಕ ಹಂಚಿಕೊಂಡ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ಅಗ್ನಿಹೋತ್ರಿ
Advertisement
ರಾಜಕೀಯವು ಸಾಮಾಜಿಕ ಬದಲಾವಣೆ ತರುವ ಅಸ್ತ್ರ ಎಂಬುದು ನನ್ನ ನಂಬಿಕೆ. ಆದರೆ ರಾಜಕೀಯಕ್ಕೆ ಬಂದ ಮೇಲೆ ಅಧಿಕಾರವನ್ನೇ ಹೆಚ್ಚಾಗಿ ಹುಡುಕುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 53ನೇ ವಯಸ್ಸಿನಲ್ಲಿ ಬೆತ್ತಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಜನ್ನಿಫರ್ ಲೊಪೇಜ್
Advertisement
Advertisement
ರಾಜಕೀಯವು ಸಾಮಾಜಿಕ, ಆರ್ಥಿಕ ಸುಧಾರಣೆಯ ನಿಜವಾದ ಸಾಧನವಾಗಿದೆ. ಅದಕ್ಕಾಗಿಯೇ ನಾವು ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತೇವೆ. ಅಧಿಕಾರಕ್ಕೆ ಬಂದ ನಂತರ ರಾಜಕಾರಣಿಗಳು ಶಿಕ್ಷಣ, ಕಲೆ ಇತ್ಯಾದಿಗಳ ಅಭಿವೃದ್ಧಿಗೆ ಶ್ರಮಿಸಬೇಕು. ರಾಜಕೀಯ ಎಂಬ ಪದದ ಅರ್ಥವನ್ನು ಅರ್ಥ ಮಾಡಿಕೊಳ್ಳಬೇಕು. ಅದು ಸಮಾಜ, ದೇಶದ ಹಿತಕ್ಕಾಗಿಯೇ ಅಥವಾ ಸರ್ಕಾರದಲ್ಲಿ ಇರುವುವರ ಹಿತಕ್ಕಾಗಿಯೇ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.