ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಜೀವ ಬೆದರಿಕೆಯ ಕಾರಣದಿಂದಾಗಿ ಅವರಿಗೆ ಒಂಟಿಯಾಗಿ ತಿರುಗಾಡುವುದಕ್ಕೆ ಕಷ್ಟವಾಗಿದೆಯಂತೆ. ಅಲ್ಲದೇ, ಅವರ ಕುಟುಂಬವನ್ನೂ ಭೇಟಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಿವೇಕ್ ತಿಳಿಸಿದ್ದಾರೆ. ಮನೆಯಿಂದ ಹೊರಗೆ ಕಾಲಿಡಲು ತಮಗೆ ಭಯವಾಗುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ಆದ ದಿನದಿಂದ ಬೆದರಿಕೆಗಳು ಬರುತ್ತಿದ್ದು, ಕೆಲವು ಬೆದರಿಕೆಗಳು ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿವೆ ಎಂದಿದ್ದಾರೆ. ಹಲವು ದಿನಗಳಿಂದ ಅವರು ಕುಟುಂಬದೊಂದಿಗೆ ಇರಲು ಸಾಧ್ಯವಾಗುತ್ತಿಲ್ಲವಂತೆ. ಇದೆಲ್ಲವೂ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ್ದರ ಪ್ರತಿಕ್ರಿಯೆ ಎಂದು ತಿಳಿಸಿದ್ದಾರೆ. ತಮಗಷ್ಟೇ ಅಲ್ಲ ಸಿನಿಮಾ ಮಾಡಿದ ಕಲಾವಿದರಿಗೂ ಇಂತಹ ಬೆದರಿಕೆ ಕರೆಗಳು ಬಂದಿವೆ ಎಂದೂ ಅವರು ತಿಳಿಸಿದ್ದರೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್
Advertisement
Advertisement
ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಆಧರಿಸಿದ ಸಿನಿಮಾ ಮಾಡಿರುವ ವಿವೇಕ್ ಅಗ್ನಿಹೋತ್ರಿ, ಮಾರಣ ಹೋಮಕ್ಕೆ ಕಾರಣರಾದವರ ಬಣ್ಣವನ್ನು ಬಯಲು ಮಾಡಿದ್ದಾರೆ. ಕಾಶ್ಮೀರಿ ಪಂಡಿತರ ಸಾವಿಗೆ ಕಾರಣ ಯಾರು ಎನ್ನುವುದನ್ನು ದಾಖಲೆ ಸಮೇತ ವಿವರಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಈ ಕುರಿತು ಅವರು ಪೊಲೀಸ್ ಇಲಾಖೆಗೂ ಕೂಡ ದೂರು ದಾಖಲಿಸಿದ್ದಾರಂತೆ.