ಬೆಳಗಾವಿ: ಸಚಿವ ಕೆ.ಸುಧಾಕರ್ ನಮ್ಮ ಲೀಡರ್ ಅಲ್ಲ. ಅವರಿಗೆ ಮಂಡ್ಯದ ಬಗ್ಗೆ ಏನು ಮಾಹಿತಿ ಇದೆ ಎಂದು ಸಚಿವ ನಾರಾಯಣ ಗೌಡ ಪ್ರಶ್ನಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರುವ ಮಾತೇ ಇಲ್ಲ. ಹಣದ ಹೊಳೆಯಿಂದ ಮಂಡ್ಯದಲ್ಲಿ ಸೋಲು ಆಗಿದೆ. ನಮ್ಮ ಬಿಜೆಪಿ ಈಗ ಈಗ ಬೆಳೆಯುತ್ತಿದೆ. ನಾನು ಕಾಂಗ್ರೆಸ್- ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಎರಡು ಡೋಸ್ ಆಗಿದೆ, 2023ಕ್ಕೆ ಬೂಸ್ಟರ್ ಡೋಸ್ – ಜೆಡಿಎಸ್‌ಗೆ ತಿವಿದ ರಾಜೇಂದ್ರ
Advertisement
Advertisement
ನಾವೂ ಹಣದಿಂದ ಚುನಾವಣೆ ಮಾಡಬಾರದು. ನಮ್ಮ ಸರ್ಕಾರ ಮಂಡ್ಯ ಜಿಲ್ಲೆಗೆ 3 ಸಾವಿರ ಕೋಟಿ ಪ್ಯಾಕೇಜ್ ನೀಡಿದೆ. ಮಂಡ್ಯದಲ್ಲಿ ಹಣದ ಹೊಳೆ ಹರಿಸಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನವರು ಈ ಬಾರಿ ವೀಕ್ ಆದ್ರು. ಹೀಗಾಗಿ ಕಾಂಗ್ರೆಸ್ ನವರ ಗೆಲುವು ಆಯ್ತು. ಕುಮಾರಸ್ವಾಮಿ ದೊಡ್ಡ ಲೀಡರ್. ನಮ್ಮ ಅಭ್ಯರ್ಥಿ ದೈರ್ಯ ಮಾಡಲಿಲ್ಲ ಎಂದರು. ಇದನ್ನೂ ಓದಿ: ಮಾಜಿ ಶಾಸಕ, ಜೆಡಿಎಸ್ ನಾಯಕ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ
Advertisement
Advertisement
ಸುಧಾಕರ ನಮ್ಮಲೀಡರ್ ಅಲ್ಲ. ಮಂಡ್ಯದ ಬಗ್ಗೆ ಅವರಿಗೆ ಏನ್ ಮಾಹಿತಿ ಇದೆ. ಯಾರು ಹಣದ ಹೊಳೆ ಹರಿಸಿದ್ರೋ ಅವರು ಗೆಲುವು ಕಂಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾವು ಹಣ ಹಂಚಿಲ್ಲ. ನಾವೂ ಅಭಿವೃದ್ಧಿ ಮೇಲೆ ಚುನಾವಣೆ ಮಾಡಿದ್ದೇವೆ. ಮಂಡ್ಯದ ಸೋಲಿನ ಹೊಣೆ ಹೊರುವ ಬಗ್ಗೆ ದಿನಗಳಲ್ಲಿ ಉತ್ತರಿಸುವೆ. ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಅವರು ಯಾರು ಎಂದು ಸುಧಾಕರ್ ವಿರುದ್ಧ ನಾರಾಯಣಗೌಡ ಕಿಡಿಕಾರಿದರು.