– 1997 ರಲ್ಲಿ ಹಳೇ ನೊಟೀಫಿಕೇಶನ್ ಕೈ ಬಿಡಲಾಗಿದೆ
– ದಾಖಲೆ ಇದ್ದರೆ ಜಮೀನು ಸಿಕ್ಕೇ ಸಿಗುತ್ತೆ
ಬೆಂಗಳೂರು: ವಕ್ಫ್ ಆಸ್ತಿ ಪರಿಶೀಲಿಸಲು ಡಿಸಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಎಸಿಗಳು, ತಹಶಿಲ್ದಾರರು, ವಕ್ಫ್ ಬೋರ್ಡ್ (Waqf Board) ಅಧಿಕಾರಿಗಳು ಟಾಸ್ಕ್ ಫೋರ್ಸ್‌ನಲ್ಲಿ ಇರುತ್ತಾರೆ. 1974 ಮುಂಚೆ ಯಾವುದೇ ದಾಖಲಾತಿ ಇದ್ದರೇ ರೈತರು ಟಾಸ್ಕ್ ಫೋರ್ಸ್‌ಗೆ ತಂದುಕೊಡಬಹುದು. ದಾಖಲಾತಿ ಇದ್ದರೆ ಅವರಿಗೆ ಜಮೀನು ಸಿಕ್ಕೇ ಸಿಗುತ್ತದೆ. ಮಂಜೂರು ಆಗಿರೋ ಜಮೀನು ಯಾರಿಂದಲೂ ವಾಪಸ್ ಪಡೆಯಲ್ಲ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.
- Advertisement -
ರೈತರ ಜಮೀನಿಗೆ (Farmers Land) ವಕ್ಫ್ ಬೋರ್ಡ್‌ನಿಂದ ನೊಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸೌಧದಲ್ಲಿ ಸಚಿವತ್ರಯರಾದ ಎಂ.ಬಿ ಪಾಟೀಲ್, ಕೃಷ್ಣಭೈರೇಗೌಡ, ಜಮೀರ್ ಅಹಮದ್ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: Raichur | ವಕ್ಫ್ ಆಸ್ತಿ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಆರೋಪ – ಸೈಟ್ ಮಾ ರಾಟ ತಡೆಯುವಂತೆ ಆಗ್ರಹ
- Advertisement -
- Advertisement -
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂ.ಬಿ ಪಾಟೀಲ್, ಸುಮಾರು 700 ಎಕರೆ ಮಾತ್ರ ವಕ್ಫ್ ಆಸ್ತಿ ಇದೆ, 124 ನೊಟೀಸ್ ಕೊಟ್ಟಿದ್ದೇವೆ. ಆದರೆ ಇಂಡಿಯ 41 ಪ್ರಾಪರ್ಟಿಗೆ ತಹಶಿಲ್ದಾರರು ನೊಟೀಸ್ ನೀಡಿಲ್ಲ. ಈ ಬಗ್ಗೆ ಎಸಿ ಕ್ರಮ ತೆಗೆದುಕೊಳ್ಳುತ್ತಾರೆ. ನೊಟೀಸ್ ನೀಡದ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಇಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ತಹಶೀಲ್ದಾರ್ ಮೇಲೆ ಕ್ರಮಕ್ಕೆ ಕಾನೂನು ಮಂತ್ರಿಗಳು ಸಲಹೆ ಕೊಟ್ಡಿದ್ದಾರೆ. ತಹಶೀಲ್ದಾರ್ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
- Advertisement -
ಹೊನವಾಡ ವಿವಾದ ನೊಟಿಫಿಕೇಶನ್ ತಪ್ಪು ಆಗಿದೆ, ಹೊನವಾಡದಲ್ಲಿ ಯಾರಿಗೂ ನೊಟೀಸ್ ಹೋಗಿಲ್ಲ. ಯಾರ ಹೆಸರಿನಲ್ಲಿ ಇದೆಯೋ ಅವರ ಹೆಸರಿನಲ್ಲೇ ಇದೆ. ಸುಮಾರು 10 ಎಕರೆ ಮಾತ್ರ ವಕ್ಫ್ ಆಸ್ತಿ ಇರೋದು. 1974 ದಾಖಲಾತಿ ಇಟ್ಟುಕೊಂಡು ವಿವಾದ ಮಾಡ್ತಿದ್ದಾರೆ. 1997 ರಲ್ಲಿ ಹಳೇ ನೊಟೀಫಿಕೇಶನ್ ಕೈ ಬಿಡಲಾಗಿದೆ. ಇದರ ಬಗ್ಗೆ ಯಾರು ಮಾತಾಡುತ್ತಿಲ್ಲ ಎಂದಿದ್ದಾರೆ.
1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ:
ಸಚಿವ ಜಮೀರ್ ಮಾತನಾಡಿ, ಅನೇಕ ದಿನಗಳಿಂದ ವಕ್ಫ್ ಅದಾಲತ್ ಮಾಡಿದ್ದೆ. ಸರ್ಕಾರದ ಒಂದು ಇಂಚು ಜಾಗವನ್ನ ನಾವು ಪಡೆದಿಲ್ಲ. ದಾನಿಗಳು 1.12 ಲಕ್ಷ ಎಕರೆ ವಕ್ಫ್ಗೆ ದಾನ ಮಾಡಿದ್ದಾರೆ. ಇದರಲ್ಲಿ ಉಳಿದಿರೋದು ಕೇವಲ 23 ಸಾವಿರ ಎಕರೆ. ಹೀಗಾಗಿ ಈ ಜಾಗ ಉಳಿದುಕೊಳ್ಳಲು ವಕ್ಫ್ ಅದಾಲತ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್
ನಾನು ತೇಜಸ್ವಿಸೂರ್ಯ ಅವರನ್ನು ಬುದ್ಧಿವಂತ ಅಂದುಕೊಂಡಿದ್ದೆ. ನಾನು ರೈತರ ಮಗ. ಅವರಿಗೆ ಎಷ್ಟು ಕಾಳಜಿ ಇದೆಯೋ ನಮಗೂ ಹೆಚ್ಚು ಕಾಳಜಿ ಇದೆ. ನಾವು ರೈತರ ಮಕ್ಕಳು. ನಾವು ರೈತರ ಒಂದು ಇಂಚು ಜಾಗ ಪಡೆಯಲ್ಲ. ವಿಜಯಪುರದಲ್ಲಿ ನಡೆದ ಮೀಟಿಂಗ್‌ಗೆ ಯತ್ನಾಳ್ ಅವರನ್ನು ಕರೆದಿದ್ದೆ. ಯತ್ನಾಳ್ ಅವರು ಬಂದಿಲ್ಲ. ಅನ್ಯಾಯ ಆಗಿದ್ದರೆ ಅವರು ಸಭೆಗೆ ಬರಬೇಕಿತ್ತು. ಆದರೆ ಬಂದಿರಲಿಲ್ಲ. ವಿಜಯಪುರದಲ್ಲಿ ಅದಾಲತ್ ಮಾಡಿದ್ದು ವಕ್ಫ್ನ ಆಸ್ತಿ ದಾಖಲಾತಿ ಮಾಡಬೇಕು ಅಂತ. 1,200 ಎಕರೆ ರೈತರ ಜಮೀನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ತೇಜಸ್ವಿಸೂರ್ಯ ಮಾಹಿತಿ ತೆಗೆದುಕೊಂಡು ಆರೋಪ ಮಾಡಬೇಕು ಎಂದು ಕಿಡಿಕಾರಿದ್ದಾರೆ.