ಧಾರವಾಡ: ಅತೀ ದುಖಃವಾದಾಗ ಇಲ್ಲ ಸಂತೋಷವಾದಾಗ ಕಣ್ಣಲ್ಲಿ ನೀರು ಬರುತ್ತದೆ. ಆದರೆ ನಮ್ಮ ಮುಖ್ಯಮಂತ್ರಿಗಳಿಗೆ ರೈತರ ಕಷ್ಟ ನೋಡಲಾಗದೆ ಕಣ್ಣೀರು ಬಂದಿದೆ ಅಂತ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಹೇಳಿದ್ದಾರೆ.
ಕೆಲವರಿಗೆ ಅಂತಃಕರಣ ಇರಲ್ಲ, ನಮ್ಮ ಸಿಎಂ ಹಾಗಲ್ಲ. ಯಾವ ಸಿಎಂ ರೈತರ ಸಾಲ ಮನ್ನಾ ಮಾಡಿದರು ಎಂಬ ರಾಜ್ಯದ ಜನರಿಗೆ ಗೊತ್ತಿದೆ. ನಾವು ಗರ್ಭಿಣಿಯರಿಗೆ ಹೆರಿಗೆ ಸೌಲಭ್ಯಗಳನ್ನು ನೀಡಿದ್ದೇವೆ. ಆದರೆ ಜನರು ಅದನ್ನ ಗಣನೆಗೆ ತೆಗೆದುಕೊಂಡಿಲ್ಲ. ಯಡಿಯೂರಪ್ಪ ಹೋರಾಟ ಮಾಡಿದರೆ ಮೈತ್ರಿ ಸರ್ಕಾರ ಬಿಳುತ್ತೆ ಎನ್ನುವ ಮಾತಿಗೆ ತಿರುಗೇಟು ನೀಡಿದ ಸಚಿವರು ಭೇರೆ ಪಕ್ಷದ ಬಗ್ಗೆ ಮಾತನಾಡೊದನ್ನ ಬಿಟ್ಟು, ತಮ್ಮ ಪಕ್ಷ ದುರಸ್ತಿ ಮಾಡಿಕೊಳ್ಳಲಿ. ನಮ್ಮ ಸರ್ಕಾರ 5 ವರ್ಷ ಪೂರೈಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಎಲ್ಲ ಜಿಲ್ಲೆಗಳಿಗೆ ತಕ್ಕಂತೆ ಹಣ ಕೊಡಲಾಗಿದೆ, ಆದರೆ ಅಧಿಕಾರಿಗಳು ನಿಗಾ ವಹಿಸಿಲ್ಲ. ತೋಟಗಾರಿಕೆ ಸಚಿವ ಸ್ಥಾನ ಅತ್ಯಂತ ಹಿರಿಯರಿಗೆ ಏಕೆ ಕೊಡಲಾಗುತ್ತೆ ಎಂದು ಮಾಧ್ಯಮದವರ ಪ್ರಶ್ನೆಗೆ ಅದು ಲಾಟರಿ ಹೊಡೆದಿದೆ, ಶಾಮನೂರ ಶಿವಶಂಕರಪ್ಪನವರಿಗೆ ಕೂಡಾ ಲಾಟರಿ ಹೊಡೆದಿತ್ತು ಎಂದು ಹೇಳಿ ಸಚಿವರು ನಕ್ಕರು.