ಬೆಂಗಳೂರು: ಒಂದನೇ ತರಗತಿ (1st Class) ದಾಖಲಾತಿಗೆ 6 ವರ್ಷ ವಯಸ್ಸು ಕಡ್ಡಾಯ ನಿಯಮ ಸಡಿಲಿಕೆ ಸಾಧ್ಯವಿಲ್ಲ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, 6 ವರ್ಷದ ನಿಯಮ ಸಡಿಲಿಕೆ ಸಾಧ್ಯವಿಲ್ಲ. ನಾನೇನು ಮಾಡಲು ಆಗೊಲ್ಲ. ಅನೇಕರು ಈ ಸಂಬಂಧ ಕೋರ್ಟ್ ಗೆ ಹೋಗಿದ್ರು. ಕೋರ್ಟ್ ಕೂಡಾ ಅವರ ಅರ್ಜಿ ವಜಾ ಮಾಡಿದೆ. ಕೋರ್ಟ್ ನಲ್ಲಿ ಏನೇ ಆದೇಶ ಬಂದರೂ ನಾವು ಪಾಲನೆ ಮಾಡ್ತೀವಿ ಅಂತ ತಿಳಿಸಿದರು.
Advertisement
Advertisement
6 ವರ್ಷದ ನಿಯಮದಿಂದ ಬೇಜಾರ್ ಆಗುತ್ತದೆ. ಆದರೆ ನಿಯಮದ ಪ್ರಕಾರ ನಾವು ನಡೆಯಬೇಕು. 1 ತಿಂಗಳು, 2 ತಿಂಗಳು ಕಡಿಮೆ ಇರೋರಿಗೆ ಕೊಟ್ಟರೆ ಮತ್ತೊಬ್ಬರು ಕೇಳ್ತಾರೆ. ಇದೆಲ್ಲವೂ ಬಹಳ ಚರ್ಚೆ ಆಗೋ ವಿಷಯ. ಎಷ್ಟೋ ಪೋಷಕರು 7 ದಿನ ಕಡಿಮೆ ಅಂತಿದ್ದಾರೆ. ಆದರೆ ಅದು ಕಾನೂನಿನಲ್ಲಿ ಇಲ್ಲ. ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಈಗ ಈ ವಿಷಯ ಕೋರ್ಟ್ ನಲ್ಲಿ ಇದೆ. ಕೋರ್ಟ್ ನಲ್ಲಿ ನಿರ್ಧಾರ ಬಂದರೆ ನಾವು ತೀರ್ಮಾನ ಮಾಡಬಹುದು. ಕೋರ್ಟ್ ತೀರ್ಮಾನದಂತೆ ನಾವು ನಡೆದುಕೊಳ್ತೀವಿ ಅಂತ ತಿಳಿಸಿದರು.
Advertisement
Advertisement
ಈ ವಯಸ್ಸಿನ ಮಿತಿ ಬಗ್ಗೆ ದೊಡ್ಡ ಚರ್ಚೆ ಆಗಬೇಕು. ಮಕ್ಕಳ ವಿಷಯದಲ್ಲಿ ನಾವು ಹುಷಾರಾಗಿ ನಿರ್ಧಾರ ಮಾಡಬೇಕು. ಮಗು ಹುಟ್ಟಿದ 3 ವರ್ಷ ಒಂದನೇ ತರಗತಿಗೆ ಸೇರಿಸಿದ್ರೆ ಕಷ್ಟ ಆಗುತ್ತದೆ. ನಿಯಮ ಸಡಿಲ ಮಾಡಿ ಅಂತ ಕೇಳ್ತಾರೆ. ಆದರೆ ನಾವು ಅದನ್ನ ಮಾಡಲು ಸಾಧ್ಯವಿಲ್ಲ ಅಂತ ಸ್ಪಷ್ಟಪಡಿಸಿದರು.