– ನಾನು ಒಬ್ಬ ತಾಯಿ, ಅಕ್ಕ ಇದ್ದೀನಿ ಎಂದು ಸಚಿವೆ ಭಾವುಕ
ಬೆಳಗಾವಿ/ಬೆಂಗಳೂರು: ರಾಜಕಾರಣದಲ್ಲಿ ರೋಷಾವೇಶವಾಗಿ ಮಾತನಾಡಬಹುದು, ಆದ್ರೆ ಸಿ.ಟಿ ರವಿ ಹೇಳಿದ ಪದ ಹೇಳೋದಕ್ಕೂ ಅಸಹ್ಯವಾಗುತ್ತೆ. ಅವರ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರರಾದ್ರು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಣ್ಣೀರಿಟ್ಟಿದ್ದಾರೆ.
ಸುವರ್ಣಸೌಧದ ಪರಿಷತ್ ಕಲಾಪದಲ್ಲಿ ಸಿ.ಟಿ ರವಿ (CT Ravi) ನಿಂದನೆ ಆರೋಪ ಪ್ರಕರಣದ ಕುರಿತು ಬೆಳಗಾವಿಯಲ್ಲಿಂದು ಸಚಿವೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ನೇರವಾಗಿ ಬೆದರಿಕೆ ಹಾಕಿದ್ದಾರೆ: ಸಿ.ಟಿ ರವಿ
Advertisement
Advertisement
ನಿನ್ನೆ ಸದನದಲ್ಲಿ ಅಂಬೇಡ್ಕರ್ (Ambedkar) ಅವರ ಬಗ್ಗೆ ಅವಹೇಳನ ಖಂಡಿಸಿ ಧರಣಿ ಮಾಡುತ್ತಿದ್ದೆವು. ಧರಣಿ ಮಾಡಿ ನಾವೆಲ್ಲ ಕೂತಿದ್ದೆವು ಸಭಾಪತಿಗಳು ಅಡ್ಜರ್ನ್ ಮಾಡಿದ್ದರು. ನಾನು ನನ್ನ ಸೀಟಲ್ಲಿ ಕೂತಿದ್ದೆ ನಮ್ಮ ನಾಯಕ ರಾಹುಲ್ ಗಾಂಧಿಗೆ (Rahul Gandhi) ಡ್ರಗ್ ಅಡಿಕ್ಟ್ ಅಂತ 3-4 ಬಾರಿ ಹೇಳಿದರು, ನಾನು ಸುಮ್ಮನೆ ಕುಳಿತಾಗ ಮತ್ತೆ ಹೇಳಿದರು. ಇದರಿಂದ ಸಿಟ್ಟಾಗಿ ನಾವು ಅವರ ಅಪಘಾತ ಪ್ರಕರಣ ಪ್ರಸ್ತಾಪಿಸಿದೆ. ಅದಕ್ಕೆ ಆ ಪದ ಉಪಯೋಗಿಸಿದ್ದಾರೆ. ಒಮ್ಮೆ ಅಲ್ಲ ಹತ್ತು ಬಾರಿ ಹೇಳಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
Advertisement
Advertisement
ನಾನು ಒಬ್ಬ ತಾಯಿ ಇದ್ದೀನಿ, ಅಕ್ಕ ಇದ್ದೀನಿ. ರಾಜಕಾರಣದಲ್ಲಿ ರೋಷಾವೇಶವಾಗಿ ಮಾತನಾಡಬಹುದು, ನಾನು ಯಾರಿಗೂ ಕಾಟ ಕೊಟ್ಟಿಲ್ಲ. ಆದ್ರೆ ಸಿ.ಟಿ ರವಿ ಅವರು ಹೇಳಿದ ಪದ ಹೇಳೋದಕ್ಕೂ ಅಸಹ್ಯ ಆಗುತ್ತೆ. ಅವರ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರ ಆದ್ರು. ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನೀವು ಆಕ್ಸಿಡೆಂಟ್ ಮಾಡಿ ಮೂವರ ಕೊಲೆಗಾರ ಎಂದಿದ್ದೆ. ಅದಕ್ಕೆ ಆ ರೀತಿ ಮಾತನಾಡಿದ್ದಾರೆ. ಸದನದಲ್ಲಿ ನ್ಯಾಯ ಸಿಗದ ಬಗ್ಗೆ ನಾನು ಏನೂ ಹೇಳಲ್ಲ. ನನ್ನ ಸೊಸೆ ನನ್ನ ಮಗ ನನಗೆ ಧೈರ್ಯ ತುಂಬಿದ್ದರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ – ಡಿಕೆ ಶಿವಕುಮಾರ್