ಹಾವೇರಿ: ಕಾಂಗ್ರೆಸ್ಸಿನವರಿಗೆ ದೇಶ ಒಂದಾಗೋದು ಬೇಕಾಗಿಲ್ಲ. ಅವರು ಮಂಗಳೂರಿಗೆ ಹೊರಟಿದ್ದು ಸಾಂತ್ವನ ಹೇಳಲು ಅಲ್ಲ, ಬದಲಾಗಿ ಬೆಂಕಿ ಹಚ್ಚಲು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಖಾದರ್ ಸೇರಿ ಕೆಲವರು ಬೆಂಕಿ ಹಚ್ಚಬೇಕಾಗುತ್ತೆ ಅನ್ನೋ ಮಾತನಾಡುತ್ತಿದ್ದಾರೆ. ಮನಸ್ಸಿನಲ್ಲಿ ಗಲಭೆ ಹಚ್ಚೋ ತೀರ್ಮಾನ ಕಾಂಗ್ರೆಸ್ ನವರು ಮಾಡಿದ್ದಾರೆ. ಈಗಾಗಲೇ ಎರಡು ಹೆಣಗಳು ಬಿದ್ದಿವೆ. ಇನ್ನೆಷ್ಟು ಹೆಣಗಳು ಬೀಳಬೇಕು ಎಂದು ಕಿಡಿಕಾರಿದರು.
Advertisement
Advertisement
ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನ ಒಡೆದು ಛಿದ್ರಛಿದ್ರ ಮಾಡಿದರು. ಈಗಿನ ಕಾಂಗ್ರೆಸ್ಸಿನವರು ಹಿಂದೂ-ಮುಸ್ಲಿಂ ಧರ್ಮವನ್ನ ಒಡೆದು ಛಿದ್ರ ಛಿದ್ರ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗರಂ ಆದರು.
Advertisement
ಪೌರತ್ವ ಕಾಯ್ದೆ ಇಡೀ ದೇಶವನ್ನ ಒಂದು ಮಾಡುತ್ತದೆ. ಕಾಂಗ್ರೆಸ್ಸಿನವರು ಇದನ್ನ ದುರುಪಯೋಗ ಮಾಡಿಕೊಂಡು ಗಲಭೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement