ಬದುಕಿದ್ದೀವಿ ಎಂದು ತೋರಿಸಲು ಕಾಂಗ್ರೆಸ್ ಪ್ರತಿಭಟನೆ: ಈಶ್ವರಪ್ಪ

Public TV
1 Min Read
KS ESHWARAPPA

ಬೆಳಗಾವಿ: ನಾವು ಬದುಕಿದ್ದೀವಿ ಎಂದು ತೋರಿಸಲು ಕಾಂಗ್ರೆಸ್ ನವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಯಾರೋ ಪ್ರಧಾನಿಗೆ ಪತ್ರ ಬರೆದ ತಕ್ಷಣ ಅದು ಸಂವಿಧಾನ ಅಲ್ಲ, ಎಫ್ ಐಆರ್ ಅಲ್ಲ. ಆ ಪತ್ರ ಇಟ್ಕೊಂಡು ನಾವು ಬದುಕಿದ್ದೀವಿ ಎಂದು ತೋರಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ.

BLG CONGRESS 1

ಕಾಂಗ್ರೆಸ್ ನವರು ಚರ್ಚೆ ಮಾಡಲಿ, ಯಾರ ಕಾಲದಲ್ಲಿ ಏನಾಗಿದೆ, ಎಷ್ಟು ಪರ್ಸೆಂಟೇಜ್ ಆಗಿದೆ ಅನ್ನೋದ್ರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

ESHWARAPPA 1

ಪ್ರತಿಭಟನೆ ಕೈ ನಾಟಕ: ಯಾರಿಗೆ ಯಾವ ಆಸಕ್ತಿ ಇದೆಯೋ ಅವ್ರೇ ಈ ಕೆಲಸ ಮಾಡೋದು. ಈ ಬಗ್ಗೆ ಅಧಿವೇಶನದಲ್ಲಿ ಅವ್ರು ಚರ್ಚೆ ಮಾಡಲಿ, ಸರ್ಕಾರ ಚರ್ಚೆಗೆ ಸಿದ್ಧವಿದೆ. ಆದರೆ ಕಾಂಗ್ರೆಸ್ ನವ್ರು ಟ್ರ್ಯಾಕ್ಟರ್ ರಾಲಿ ಮಾಡ್ತಿರೋದು ನಾಟಕ ಅಷ್ಟೇ ಎಂದು ವ್ಯಂಗ್ಯವಾಡಿದರು.

BLG CONGRESS

ಈ ಪರ್ಸೆಂಟೇಜ್ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಅವರು ಕೇಳ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ. ಆದರೆ ಈ ಬಗ್ಗೆ ತನಿಖೆ ಆದರೆ, ಕಾಂಗ್ರೆಸ್ ನವರಿಗೆ ಶಿಕ್ಷೆ ಆಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *