ರಾಯಚೂರು: ಎಲ್ಲಾ ಚುನಾವಣೆಯಲ್ಲಿ ಸೋತರು ಸಿದ್ದರಾಮಯ್ಯಗೆ ಸೊಕ್ಕು ಇನ್ನೂ ಇಳಿದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
Advertisement
ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕರ್ಣಿ ಸಭೆ ಹಿನ್ನೆಲೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಈಶ್ವರಪ್ಪನವರು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಿಂದೆ ಇಡೀ ಕುರುಬ ಸಮಾಜವಿದೆ. ಇಡೀ ಕರ್ನಾಟಕ ರಾಜ್ಯವಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇದ್ದಾರೆ. ಇಷ್ಟೇಲ್ಲಾ ಇದ್ದರೂ ಏಕೆ ನೆಗೆದುಬಿತ್ತು. ನನ್ನ ಹಿಂದೆ ಹಿಂದುಳಿದವರು ಇದ್ದಾರೆ ಅಂತ ಸಿದ್ದರಾಮಯ್ಯ ಇವತ್ತು ಹೇಳಲಿ. ಸಿದ್ದರಾಮಯ್ಯಗೆ ಹಿಂದುಳಿದವರ ಸಮಾವೇಶ ಮಾಡಲು ಸ್ವಾತಂತ್ರ್ಯ ಇಲ್ಲ. ಸಿದ್ದರಾಮಯ್ಯನವರ ಕಾಲನ್ನು ಡಿ.ಕೆ. ಶಿವಕುಮಾರ್ ಕಟ್ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರತ್ಯೇಕ ಸಭೆ ಕೂಡ ಮಾಡದಂತೆ ಆಗಿದೆ. ಇದು ರಾಜ್ಯದ ಕಾಂಗ್ರೆಸ್ ಪರಿಸ್ಥಿತಿ ಆಗಿದೆ. ಕಾಂಗ್ರೆಸ್‍ನದು ಬರೀ ಉತ್ತರನ ಪೌರುಷ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ
Advertisement
Advertisement
ಎಲ್ಲಾ ಚುನಾವಣೆಯಲ್ಲಿ ಸೋತರು ಸಹ ಸಿದ್ದರಾಮಯ್ಯಗೆ ಸೊಕ್ಕು ಇನ್ನೂ ಇಳಿದಿಲ್ಲ. ನಮ್ಮ ಸಂಘಟನೆ ಶಕ್ತಿಶಾಲಿಯಾಗಿದೆ. ಇಡೀ ಕರ್ನಾಟಕದ ಬೂತ್ ಮಟ್ಟದಲ್ಲಿ ನಮ್ಮ ಸಂಘಟನೆ ಕಾರ್ಯಕರ್ತರು ಇದ್ದಾರೆ. ನರೇಂದ್ರ ಬಾಬು ಓಬಿಸಿ ಅಧ್ಯಕ್ಷರಾದ ಬಳಿಕ ಶಕ್ತಿ ಶಾಲಿ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಮಾಡಲು ಸಹ ಕಾರ್ಯಕರ್ತರು ಇಲ್ಲ. ಸದಸ್ಯತ್ವ ಮಾಡುವವರಿಗೆ ಮೊಬೈಲ್ ಮತ್ತು ಫಿಡ್ಜ್ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಇಷ್ಟು ನಾಚಿಕೆಗೇಡು ಕಾಂಗ್ರೆಸ್‍ಗೆ ಬರುತ್ತೆ ಅಂತ ನನ್ನ ಜೀವನದಲ್ಲಿ ನಾನು ನೋಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ