ಮಡಿಕೇರಿ: ರಾಜ್ಯದಲ್ಲಿ ಪ್ರವಾಹ ಬಂದರು ಸಚಿವರು, ಶಾಸಕರು ಕ್ಷೇತ್ರಗಳಿಗೆ ಹೋಗುತ್ತಿಲ್ಲ ಎಂದು ಪ್ರತಿಪಕ್ಷ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಬಿಜೆಪಿ ಏನು ಮಳೆ ನಿಲ್ಲಿಸೋಕೆ ಆಗುತ್ತಾ..? ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ರಾಜ್ಯದಲ್ಲಿ ಮಳೆ ನಿಲ್ಲುಸುವುದಕ್ಕೆ ಬಿಜೆಪಿ ಬರುತ್ತಾ, ಇದಕ್ಕೆ ರಾಜಕೀಯ ತರುವುದಕ್ಕೆ ಬರುತ್ತಾ? ಇದರಲ್ಲಿ ರಾಜಕೀಯದ ಪ್ರಶ್ನೆಯೇ ಬರಲ್ಲ ಈಗಾಗಲೇ ನಮ್ಮ ಸಚಿವರು ಶಾಸಕರು ಮಳೆ ಹಾನಿ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ. ಅಲ್ಲದೇ ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಕಾಂಗ್ರೆಸ್‍ನವರು ಸುಮ್ಮನೆ ಟೀಕಿಸುತ್ತಾರೆ. ಇದನ್ನೂ ಓದಿ: ಐಎಎಫ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್‍ಗೆ ವೀರ ಚಕ್ರ ಪ್ರಶಸ್ತಿ
Advertisement
Advertisement
ಕೊಡಗಿನಲ್ಲಿ 45 ವರ್ಷಗಳಿಂದ ಬಂದಿರದ ಮಳೆ ಈ ಭಾರೀ ಬಂದಿದೆ. ಸಿಎಂ ಅವರು ಇಂದು ಮಡಿಕೇರಿಗೆ ಬರಬೇಕಿತ್ತು. ಆದರೆ ಮಳೆ ಹಾನಿ ಸಮೀಕ್ಷೆ ನಡೆಸಲು ಹೋಗಿದ್ದಾರೆ. ಮಳೆಯಿಂದ ಈಗಾಗಲೇ ರಸ್ತೆಗಳು ಹಾಳಾಗಿವೆ ಎನ್ನುವುದು ಗೊತ್ತಿದೆ. ಸರ್ಕಾರ ಎಲ್ಲಾ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ