ಬೆಂಗಳೂರು: ರಾಜ್ಯದ ಬರ ನಿರ್ವಹಣೆಗೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೈತರಿಗೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ತಿಳಿಸಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ರವಿಕುಮಾರ್ ಪ್ರಶ್ನೆ ಕೇಳಿದ್ರು.
ರೈತರಿಗೆ ಸರ್ಕಾರ ಕೊಡೋ 2 ಸಾವಿರ ಪರಿಹಾರ ಸಾಕಾಗೊಲ್ಲ. 125 ವರ್ಷಗಳ ಬಳಿಕ ಇಷ್ಟು ಬರ ಬಂದಿದೆ. 10 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ಬರ ಪರಿಹಾರ ಹಣ ಕೊಡಬೇಕು. ಸಿಎಂ ಅವರು ಒಂದು ಸಮುದಾಯಕ್ಕೆ ಘೋಷಣೆ ಮಾಡಿದ್ರು. ಅದನ್ನ ರೈತರಿಗೆ ಕೊಡಿ. ರೈತರಿಗೆ 10 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ
Advertisement
Advertisement
ಇದಕ್ಕೆ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ, ರಾಜ್ಯದಲ್ಲಿ 223 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. 20 ಕೋಟಿ ಮೇವುಗಾಗಿ, 324 ಕೋಟಿ ಬರ ನಿರ್ವಹಣೆಗೆ ಕೊಡಲಾಗಿದೆ. 775 ಕೋಟಿ ಡಿಸಿ ಅಕೌಂಟ್‌ನಲ್ಲಿ ಹಣ ಇದೆ. ರೈತರಿಗೆ ಪ್ರಾಥಮಿಕವಾಗಿ 2 ಸಾವಿರ ಬರ ಪರಿಹಾರ ಕೊಡಲಾಗಿದೆ. ಕೇಂದ್ರ ಸರ್ಕಾರಕ್ಕೆ 18,171.44 ಕೋಟಿ NDRF/SDRF ಮಾರ್ಗಸೂಚಿ ಅನ್ವಯ ಪರಿಹಾರ ಕೇಳಲಾಗಿದೆ. ಬರದಿಂದ 35,162 ಕೋಟಿ ರೈತರಿಗೆ ನಷ್ಟ ಆಗಿದೆ ಎಂದು ಮಾಹಿತಿ ನೀಡಿದರು.
Advertisement
2000 ಇಸವಿ ನಂತರ ಬರಗಾಲ ಪ್ರಾರಂಭವಾಗಿದೆ. ಈ ವರ್ಷ ಹೆಚ್ಚು ಬರ ಆಗಿದೆ. ಸರ್ಕಾರ ಬರ ನಿರ್ವಹಣೆಗೆ ಸಾಕಷ್ಟು ಕೆಲಸ ಮಾಡಿದೆ. ಸಿಎಂ 3 ಸಭೆ ಮಾಡಿದ್ದಾರೆ . 10 ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಮಾಡಿದ್ದೇವೆ. ಮುಂಗಾರಿನಲ್ಲಿ 12 ರಾಜ್ಯ, ಹಿಂಗಾರಿನಲ್ಲಿ 18 ರಾಜ್ಯಗಳಲ್ಲಿ ಬರ ಬಂದಿದೆ. ಸೆಪ್ಟೆಂಬರ್ 13 ಕ್ಕೆ ನಾವು ಬರದ ತಾಲೂಕು ಘೋಷಣೆ ಮಾಡಿದ್ವಿ. ಸೆಪ್ಟೆಂಬರ್ 22 ಕ್ಕೆ ಕೇಂದ್ರಕ್ಕೆ ಮೊದಲ ಪತ್ರ ಬರೆದಿದ್ದೇವೆ. ಮೇವಿನ ಕೊರತೆ ಆದರೆ ಅಂತ ರೈತರಿಗೆ 7 ಲಕ್ಷ ಬಿತ್ತನೆ ಬೀಜದ ಕಿಟ್ ನೀಡಿದ್ದೇವೆ. ಕುಡಿಯುವ ನೀರಿನ ಸಮಸ್ಯೆಗೆ ಖಾಸಗಿ ಬೋರ್‌ವೆಲ್, ಟ್ಯಾಂಕರ್ ಮೂಲಕ ನೀರು ಕೊಡ್ತಿದ್ದೇವೆ. ರಾಜ್ಯದಿಂದ ಮೇವು ಹೊರಗೆ ಹೋಗದಂತೆ ನಿಯಮ ಮಾಡಲಾಗಿದೆ. 894 ಕೋಟಿ ಡಿಸಿ, ತಹಶಿಲ್ದಾರರ ಬಳಿ ಹಣ ಇಟ್ಟಿದ್ದೇವೆ. ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ
Advertisement
ಕೇಂದ್ರ ಕೃಷಿ, ಗೃಹ ಇಲಾಖೆ ಕಾರ್ಯದರ್ಶಿಗಳ ಭೇಟಿ ಮಾಡಿದ್ದೇವೆ. ಕೇಂದ್ರ ಹಣಕಾಸು ಸಚಿವರ ಭೇಟಿ ಮಾಡಿ ಹಣ ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದೇವೆ. ಕೇಂದ್ರ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಭಾಗಶಃ ಪರಿಹಾರವಾಗಿ 2 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಇದು ಬಿಡುಗಡೆ ಆಗುತ್ತದೆ. ಈ ಬಾರಿ ಮ್ಯಾನ್ಯುಯಲ್ ಆಗಿ ರೈತರಿಗೆ ಹಣ ಕೊಡ್ತಿಲ್ಲ. ನೇರವಾಗಿ ರೈತರ ಅಕೌಂಟ್‌ಗೆ ಆನ್‌ಲೈನ್ ಮೂಲಕ ಹಣ ಹಾಕ್ತೀವಿ. ರೈತರಿಗೆ ಇನ್ಶುರೆನ್ಸ್‌ನಿಂದ 2,500 ಕೋಟಿ ಪರಿಹಾರ ಕೊಡ್ತೀವಿ. NDRF-SDRF ಅಡಿ 4 ಸಾವಿರ ಕೋಟಿ ಪರಿಹಾರ ಕೊಡುವ ಸಿದ್ದತೆ ಆಗಿದೆ. ಕೇಂದ್ರದ ಹಣ ಬಿಡುಗಡೆ ಆದ ಕೂಡಲೇ ಹಣ ಕೊಡ್ತೀವಿ ಎಂದರು.