ಬೀದರ್: ಫಿಟ್ಸ್ ಬಂದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಬಾಲಕನನ್ನು ಆಸ್ಪತ್ರೆ ಸೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಮಾನವೀಯತೆ ಮೆರೆದಿದ್ದಾರೆ.
ಬೀದರ್‌ನ (Bidar) ಹೊರವಲಯದ ಶಾಪೂರ್ ಗೇಟ್ ಬಳಿ ಈ ಘಟನೆ ನಡೆದಿದೆ. ಸಚಿವ ಈಶ್ವರ್ ಖಂಡ್ರೆ ಹೈದರಾಬಾದ್ ಏರ್‌ಪೋರ್ಟ್‌ಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಫಿಟ್ಸ್ ಬಂದು ಬಾಲಕನೋರ್ವ ಸೈಕಲ್ ಮೇಲಿಂದ ಬಿದ್ದು ಒದ್ದಾಡುತ್ತಿದ್ದ. ಇದನ್ನು ಕಂಡ ಸಚಿವರು ಕಾರು ನಿಲ್ಲಿಸಿ, ಬಾಲಕನನ್ನು ಕೂಡಲೇ ಆಟೋದಲ್ಲಿ ಬ್ರೀಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ.ಇದನ್ನೂ ಓದಿ: ವೋಟ್ ಚೋರಿ ಮಾಡಿಯೇ ಕಾಂಗ್ರೆಸ್ ಅಧಿಕಾರಕ್ಕೇರಿದ್ದು, ಅವರ ಸಹಿಸಂಗ್ರಹ 1 ಕೋಟಿಯಾದ್ರೆ ನಮ್ದು 7 ಕೋಟಿ – ಅಶೋಕ್
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಅಪ್ಪೆಯನ್ನು ಬಾಲಕನ ಜೊತೆಗೆ ಕಳುಹಿಸಿ, ಬ್ರೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸಚಿವ ಖಂಡ್ರೆ ಮಾನವೀಯತೆಗೆ ಜಿಲ್ಲೆಯ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟನೆ ಬಳಿಕ ಸಚಿವ ಖಂಡ್ರೆ ಹೈದರಾಬಾದ್ ಏರ್‌ಪೋರ್ಟ್‌ಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ.ಇದನ್ನೂ ಓದಿ: ಯುದ್ಧಕ್ಕೆ ಸಿದ್ಧ: ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ ಪಾಕ್‌ಗೆ ತಾಲಿಬಾನ್ ವಾರ್ನಿಂಗ್

