ಶಿವಮೊಗ್ಗ: RSS ನವರು ತಾಲಿಬಾನಿಗಳು ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಕೆಲವರಿಗೆ ಸ್ವಲ್ಪ ಹುಚ್ಚು ಇರುತ್ತದೆ. ಕೆಲವರು ಅರೆ ಹುಚ್ಚರು ಇರುತ್ತಾರೆ. ಆದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಹುಚ್ಚು ಹಿಡಿದಿದೆ. ಆ ಹುಚ್ಚು ಯಾವಾಗ ಕಡಿಮೆಯಾಗಲಿದೆ ಎಂಬುದನ್ನು ಅವರೇ ಹೇಳಬೇಕಿದೆ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
Advertisement
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳು ಆಗಿವೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಏನಾದ್ರೂ ಒಂದು ಹೇಳುತ್ತಿರಬೇಕು. ಸಿದ್ದರಾಮಯ್ಯ RSS ನವರನ್ನು ತಾಲಿಬಾನಿಗೆ ಹೋಲಿಕೆ ಮಾಡಿದ್ದಾರೆ. ಭಾರತದ ಪ್ರಧಾನಿ ಮೋದಿಯವರು ಆರ್ ಎಸ್ ಎಸ್ ನ ಸ್ವಯಂ ಸೇವಕ. RSS ಟೀಕೆ ಮಾಡಿದರೆ ಭಾರತೀಯ ಸಂಸ್ಕೃತಿಯನ್ನು ಟೀಕೆ ಮಾಡಿದ ಹಾಗೆ. ದೇಶದಲ್ಲಿ ಆರ್ ಎಸ್ ಎಸ್ ಇಲ್ಲದಿದ್ದರೆ ಏನು ಆಗುತಿತ್ತು ಎಂಬುದನ್ನು ನೆನಪಿಸಿಕೊಳ್ಳಿ ಎಂದರು. ಇದನ್ನೂ ಓದಿ: ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ
Advertisement
Advertisement
ಮಾಜಿ ಪ್ರಧಾನಿ ನೆಹರು ಅವರು ಸ್ವಾತಂತ್ರೋತ್ಸವದ ಪೆರೇಡ್ ಗೆ RSS ನವರನ್ನು ಆಹ್ವಾನಿಸಿದ್ದರು. ಹಾಗಾದ್ರೆ ನೆಹರು ಅವರು RSS ನವರು ತಾಲಿಬಾನಿಗಳು ಅಂತಾ ಗೊತ್ತಿದ್ದರೂ ಆಹ್ವಾನ ನೀಡಿದ್ದಾರಾ..? ಇನ್ನು ಮಹಾತ್ಮ ಗಾಂಧೀಜಿ ಅವರು RSS ಶಿಬಿರಕ್ಕೆ ಭೇಟಿ ನೀಡಿದ್ದರು. RSS ಸಂಘಟನೆ ಒಳ್ಳೆಯ ಸಂಘಟನೆ ಎಂದಿದ್ದರು. ಹಾಗಾದ್ರೆ ಗಾಂಧೀಜಿಯವರನ್ನು ತಾಲಿಬಾನಿಗಳು ಅಂತಾ ಕರೆಯುತ್ತೀರಾ. ನೆಹರು, ಗಾಂಧಿ ಅವರುಗಳೇ ಆರ್ ಎಸ್ ಎಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವಾಗ, ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದರು. ಇದನ್ನೂ ಓದಿ: ಸಾರಿ ಮಮ್ಮಿ, ಪಪ್ಪಾ – ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ: ಸೌಜನ್ಯ ಡೆತ್‍ನೋಟ್
Advertisement
ಸಿದ್ದರಾಮಯ್ಯ ಅವರು ಈ ಹಿಂದೆ ಹಿಂದುಳಿದ ವರ್ಗದವರ ಪರ ಕೆಲಸ ಮಾಡುತ್ತೇನೆ ಅಂತಾ ಹೇಳುತ್ತಿದ್ದರು. ಜಾತಿ ಜನಗಣತಿ ಜಾರಿಗೆ ತನ್ನಿ. ಇಲ್ಲದಿದ್ದರೆ ಬಿಡುವುದಿಲ್ಲ ಎನ್ನುತ್ತಿದ್ದರು. ಜಾತಿ ಜನಗಣತಿಗೆ 200 ಕೋಟಿ ಬಿಡುಗಡೆ ಮಾಡಿದ್ದೀನಿ ಎನ್ನುತ್ತಿದ್ದರು. 200 ಕೋಟಿ ಬಿಡುಗಡೆ ಮಾಡಿದ ಮೇಲೆ ವರದಿ ಏಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ದಲಿತರು, ಹಿಂದುಳಿದವರ ಮೇಲೆ ನಿಮಗೆ ಪ್ರೀತಿ ಇದ್ದಿದ್ದರೆ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿಸಬೇಕಿತ್ತು ಎಂದರು.
ಸ್ವಾತಂತ್ರ್ಯ ಬಂದ ದಿನದಿಂದಲೂ ಹಿಂದುಳಿದವರು, ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರು. ಹಿಂದುಳಿದವರನ್ನು ದಲಿತರನ್ನು ಉದ್ದಾರ ಮಾಡುವ ಪಕ್ಷ ಕಾಂಗ್ರೆಸ್ ಎನ್ನುತ್ತಿದ್ದರು. ಅವರು ಅದನ್ನು ನಂಬಿಕೊಂಡಿದ್ದರು. ಆದರೆ ಇದೀಗ ಹಿಂದುಳಿದವರು, ದಲಿತರು ಬದಲಾಗಿದ್ದಾರೆ. ಹಿಂದುಳಿದವರನ್ನ, ದಲಿತರನ್ನು ಕಾಂಗ್ರೆಸ್ ಉದ್ಧಾರ ಮಾಡಲ್ಲ. ನಮ್ಮನ್ನು ಉದ್ಧಾರ ಮಾಡೋದು ಬಿಜೆಪಿ ಅಂತಾ ನಮ್ಮ ಜೊತೆಗೆ ಬರುವುದಕ್ಕೆ ಆರಂಭಿಸಿದ್ದಾರೆ ಎಂದರು.