– ಮೈಸೂರಿನ ಉದಯಗಿರಿ ಗಲಾಟೆಗೆ ಸಚಿವರ ಬೇಸರ
– ಅವಹೇಳನಕಾರಿ ಪೋಸ್ಟ್; ಆರೋಪಿ ಸುರೇಶ್ ಅರೆಸ್ಟ್
ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರ ನಡೆಗೆ ಸಚಿವ ಕೆ.ಎನ್ ರಾಜಣ್ಣ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈ ಪೊಲೀಸರಿಗೆ ಏನಾಗಿದೆ? ಮಿನಿಮಮ್ ಕಾಮನ್ ಸೆನ್ಸ್ ಬೇಡ್ವಾ? ಯಾರೋ ಆರ್‌ಎಸ್‌ಎಸ್ ಅವನು ಕೃತ್ಯ ಮಾಡಿದ್ದಾನೆ. ಅವನ ಮೇಲೆ ಕೇಸ್ ಆಗಿದ್ದು, ಆರೆಸ್ಟ್ ಸಹ ಆಗಿದ್ದಾನೆ. ಆದರೆ ಆತನನ್ನ ಪೊಲೀಸರು ಏಕೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇಟ್ಟರು? ಉದಯಗಿರಿ ಮುಸ್ಲಿಂ ಬಾಹುಳ್ಯ ಏರಿಯಾ ಎಂದು ತಿಳಿದಿದೆ. ಆದರೂ ಅಲ್ಲೇ ಯಾಕೆ ಆರೋಪಿಯನ್ನ ಇಡಬೇಕಿತ್ತು. ಈ ಪೊಲೀಸವರಿಗೆ ಬುದ್ಧಿ ಬೇಡ್ವ. ಸರ್ಕಾರದಲ್ಲಿ ನಾವಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ನಿರ್ಧಾರ ಮಾಡಬೇಕು ಎಂದು ಕಿಡಿಕಾರಿದ್ದಾರೆ.
ಶಾಸಕರ ಮಗನ ರೌಡಿಸಂ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೇ ಆಗಲಿ ಅಧಿಕಾರಿಗಳ ವಿರುದ್ಧ ಆ ರೀತಿ ಮಾತನಾಡಬಾರದು. ಅಂತಹವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಮಿನಿಸ್ಟರ್ ಆಗಲಿ, ಶಾಸಕ ಆಗಲಿ ಅಥವಾ ಶಾಸಕರ ಮಗನೇ ಆಗಲಿ ಯಾರೂ ಹಾಗೆ ಮಾತನಾಡಬಾರದು. ಈ ರೀತಿ ಮಾತನಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಇವತ್ತು ದೆಹಲಿಗೆ ಹೋಗುತ್ತಿದ್ದೇನೆ. ಮೊದಲೇ ಹೇಳಿದ ಹಾಗೆ ನನ್ನದು ಮುಚ್ಚುಮರೆ ವ್ಯಾಪಾರ ಇಲ್ಲ. ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಹಾಗೂ ಅಮಿತ್ ಶಾ ಅವರನ್ನ ಭೇಟಿ ಆಗುತ್ತಿದ್ದೇನೆ. ಇನ್ನು ಹೈಕಮಾಂಡ್ ನಾಯಕರಾದ ವೇಣುಗೋಪಾಲ್, ಸುರ್ಜೇವಾಲಾರನ್ನ ಭೇಟಿ ಆಗುತ್ತೇನೆ. ಹೇಳಲು ಒಂದೆರಡಲ್ಲ ಬೇಕಾದಷ್ಟಿದೆ. ಪಕ್ಷ ಸಂಘಟನೆಗೆ ಸಮಾವೇಶಗಳ ಅಗತ್ಯ ಇದೆ. ಯಾವುದೇ ಸಮುದಾಯವೇ ಇರಲಿ, ಪಕ್ಷದ ಒಳಗೆ ಇರಲಿದೆ. ಗುಂಪುಗಾರಿಕೆ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಮಾತಾನಾಡುವುದಿಲ್ಲ ಎಂದರು.