– ಬಿಜೆಪಿ ಟೀಕಿಸುವ ಭರದಲ್ಲಿ ಭಗವಾನ್ ರಾಮನ ಅಪಮಾನಿಸುವ ಮಾತು
ತುಮಕೂರು: ಅಯೋಧ್ಯೆ ರಾಮಮಂದಿರ (Ram Mandir) ವಿಚಾರವಾಗಿ ಬಿಜೆಪಿ ನಡೆಯನ್ನು ಟೀಕಿಸುವ ಭರದಲ್ಲಿ ಭಗವಾನ್ ಶ್ರೀರಾಮನನ್ನು (Sri Ram) ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ (K.N.Rajanna) ಅವಮಾನಿಸಿದ್ದಾರೆ.
ತುಮಕೂರಿನಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟ್ ಅಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಅಂತಾ ಹೇಳ್ತಿದ್ರು. ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಗೆದ್ದರೇ ಸಿದ್ದರಾಮಯ್ಯರೇ ಪೂರ್ಣಾವಧಿ ಸಿಎಂ – ಯತೀಂದ್ರ ಹೊಸ ಬಾಂಬ್!
ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರೆ ಅಲ್ಲಿ. ಇನ್ನೊಂದು ಐದಾರು ತಿಂಗಳು ಕಳೀಲಿ ಏನೇನ್ ಬರ್ತವೆ, ಏನೇನು ಅಂತೇಳಿ. ಯಾವತ್ತೂ ಕೂಡ ಶ್ರೀರಾಮ ಎಲ್ಲಾ ಜನರನ್ನ ಆಶೀರ್ವದಿಸುವ ದೇವರು. ಅದಕ್ಕೋಸ್ಕರ ರಾಮರಾಜ್ಯದ ಕಲ್ಪನೆ ಬಂದಿದ್ದು ಎಂದು ತಿಳಿಸಿದ್ದಾರೆ.
ಈಗ ಅದು ಬಿಜೆಪಿ ಶ್ರೀರಾಮನೋ, ಮೋದಿ ಶ್ರೀರಾಮನೋ ನೋಡೋಣ. ಅದು ಏನಾಗುತ್ತೆ ಅಂತಾ. ನಮ್ಮೂರಲ್ಲಿ ನೂರಾರು ವರ್ಷ ಇತಿಹಾಸ ಇರುವಂತಹ, ಪಾವಿತ್ರ್ಯವಾಗಿರುವ ಶ್ರೀರಾಮನ ದೇವಸ್ಥಾನಗಳಿವೆ. ಈಗ ಅದನ್ನ ಬಿಟ್ಟು ಇವರು ಚುನಾವಣೆಗೋಸ್ಕರ ದೇವಸ್ಥಾನಗಳನ್ನ ಕಟ್ಟಿ, ಜನರಿಗೆ ಮೋಸ ಮಾಡೋ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಪೂರ್ಣ ತೋಳಿನ ಅಂಗಿ, ಶೂ ಧರಿಸುವುದು ನಿಷೇಧ – PSI ಪರೀಕ್ಷಾ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ