ತುಮಕೂರು: ನಮಗೆ ಇಡೀ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಅಂತಹ ಪಾಪದ ಕೆಲಸ ನಾವು ಮಾಡಿಲ್ಲ ಎಂದು ಸಚಿವ ಮಾಧುಸ್ವಾಮಿ ಅವರು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಕ್ಷೇತ್ರದ ಅನುದಾನವನ್ನು ಬಿಜೆಪಿ ಸರ್ಕಾರ ಹಿಂಪಡೆದಿದೆ ಎಂಬ ಪರಂ ಆರೋಪಕ್ಕೆ ಪ್ರತಿಕ್ರಿಯಿಸಿದರು. ಜಿ.ಪರಮೇಶ್ವರ್ ಜಿಲ್ಲಾ ಮಂತ್ರಿಗಳಾಗಿದ್ದಾಗ ತಾರತಮ್ಯ ನೀತಿ ಅನುಸರಿಸಿದ್ದರು. ಕೇವಲ ಮಧುಗಿರಿ ಮತ್ತು ಕೊರಟಗೆರೆಗೆ 110 ಭವನಗಳನ್ನ ಕೊಟ್ಟಿದ್ರು. ಚಿಕ್ಕನಾಯಕನಹಳ್ಳಿಗೆ 2 ಮಾತ್ರ ಭವನ ಕೊಟ್ಟಿದ್ರು. ಇದು ಮಾನ ಮರ್ಯಾದೇ ಇರುವವರು ಮಾಡೊ ಕೆಲಸನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಯಲಲಿತಾ ನಿವಾಸ ಸ್ವಾಧೀನ- ತಮಿಳುನಾಡು ಸರ್ಕಾರದ ನಿಲುವಿಗೆ ಹೈಕೋರ್ಟ್ ತಡೆ
Advertisement
Advertisement
ನಮಗೆ ಇಡೀ ಜಿಲ್ಲೆ ಅಭಿವೃದ್ದಿ ಮುಖ್ಯ, ಅಂತಹ ಪಾಪದ ಕೆಲಸ ನಾವು ಮಾಡಿಲ್ಲ. ಇವರ ಸರ್ಕಾರ ಇದ್ದಾಗ ಇಚ್ಚಾನುಸಾರ ಅನುದಾನ ಮಂಜೂರು ಮಾಡಿಕೊಂಡಿದ್ರು. ಅದಕ್ಕೆಲ್ಲ ಅಡ್ಡಗೋಡೆ ಹಾಕಿ ಕಂಟ್ರೋಲ್ ಮಾಡಿದ್ವಿ. ಎಲ್ಲಾ ಕಡೆ ಅನುದಾನ ಸಮರ್ಪಕವಾಗಿ ಹಂಚಲು ವಾತವರಣ ಸೃಷ್ಟಿ ಮಾಡಿದ್ದೇವೆ. ಮಂತ್ರಿಯಾಗಿ ನಿಮ್ಮ ಜನ್ಮಕ್ಕೆ ನಾಚಿಕೆಯಾಗಲ್ವಾ..? ಕೊರಟಗೆರೆ ಕ್ಷೇತ್ರಕ್ಕೆ ಮನೆಗಳ ಮಹಾಪೂರ ಹರಿಸಿದ್ರಿ. ಬೇರೆ ಕ್ಷೇತ್ರಗಳಿಗೆ ಏಕೆ ಮಾಡ್ಲಿಲ್ಲ ಎಂದು ಮಾಧುಸ್ವಾಮಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಂಹಕ್ಕೆ ಆಹಾರವಾಗುತ್ತಿದ್ದ ಯುವಕ: ತಪ್ಪಿತು ಭಾರೀ ದುರಂತ