ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ನೀಡಿರುವ ಸಾಲ ವಸೂಲಾತಿ (Loan Recovery) ಪ್ರಸಕ್ತ ವರ್ಷ 50% ಪ್ರಗತಿ ಸಾಧಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಟಾರ್ಗೆಟ್ ನೀಡಿದ್ದಾರೆ.
KMDC ಭವನದಲ್ಲಿ ಗುರುವಾರ ನಿರ್ದೇಶಕ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಾಲ ವಸೂಲಾತಿಯಲ್ಲಿ ಕಳಪೆ ಪ್ರದರ್ಶನದ ತೋರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ವರ್ಷ 50% ವಸೂಲಾತಿ ಆಗಲೇಬೇಕು ಎಂದು ನಿರ್ದೇಶನ ನೀಡಿದರು. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?
ಶೈಕ್ಷಣಿಕ, ಉದ್ದಿಮೆ, ಸ್ವಾವಲಂಬಿ ಯೋಜನೆ ಸೇರಿ ನಿಗಮ ನೀಡಿರುವ ಸಾಲದ ಪೈಕಿ 582 ಕೋಟಿ ರೂ. ವಸೂಲಾತಿ ಆಗಬೇಕಿದೆ. ವಸೂಲಾತಿ ಪ್ರಮಾಣ 2021 ರಲ್ಲಿ 15%, 2022 ರಲ್ಲಿ 25% ಇದೆ. 2023-24 ರಲ್ಲಿ 50% ಗುರಿ ಸಾಧಿಸಬೇಕು ಎಂದು ಸೂಚನೆ ನೀಡಿದರು. ಇದನ್ನೂ ಓದಿ: 26/11 ರಂತೆ ಮತ್ತೊಂದು ಭಯೋತ್ಪಾದನಾ ದಾಳಿಗೆ ಸಿದ್ಧರಾಗಿ- ಮುಂಬೈ ಪೊಲೀಸ್ರಿಗೆ ಬೆದರಿಕೆ ಕರೆ
ಕಲಬುರಗಿ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಬೆಂಗಳೂರು ಕೇಂದ್ರ ಜಿಲ್ಲೆಗಳಲ್ಲಿ ಸಾಲ ವಸೂಲಾತಿ ಪ್ರಮಾಣ ಕೇವಲ ಶೇ.1.36 ರಿಂದ 2.64 ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ಅದಕ್ಕಾಗಿ ವೇತನ, ಸೌಲಭ್ಯ ನೀಡಬೇಕೆ ಎಂದು ಪ್ರೆಶ್ನೆ ಮಾಡಿದರು. ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳ ಸಭೆ ಇದೇ ತಿಂಗಳು 25 ರಂದು ಕರೆಯುವಂತೆ ಸೂಚಿಸಿದರು. ಇನ್ಮುಂದೆ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ ಎಂದು ಹೇಳಿದರು.
ಸಾಲ ಮರು ಪಾವತಿ ವಿಚಾರದಲ್ಲಿ ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಿ, ಸಾಲ ಮರುಪಾವತಿ ಸರಿಯಾಗಿ ಮಾಡುವವರಿಗೆ ಪ್ರಸಂಶನಾ ಪ್ರಮಾಣ ಪತ್ರ ನೀಡಿ ಮತ್ತೆ ಹೊಸದಾಗಿ ಸಾಲ ನೀಡುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಸಾಲ ವಸೂಲಾತಿಗಾಗಿ ಅಭಿಯಾನ ಆರಂಭಿಸಿ ಅದಕ್ಕಾಗಿ ವಾಹನ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಿದರು.
ಅಧಿಕಾರಿಗಳಿಗೆ ತೀವ್ರ ತರಾಟೆ:
2016-17ನೇ ಸಾಲಿನಿಂದ ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಗಳನ್ನ ರಾಜ್ಯದಲ್ಲಿ ಪಡೆಯದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣದಿಂದ ಪ್ರಾರಂಭ ಮಾಡಲು ಸೂಚಿಸಿದರು. ಶಿಕ್ಷಣ ಹಾಗೂ ಉದ್ದಿಮೆಗೆ ಎನ್‌ಎಂಡಿಸಿಯಿಂದ ವರ್ಷಕ್ಕೆ 10 ಕೋಟಿ ರೂ. ವರೆಗೆ ಸಾಲ ದೊರೆಯಲಿದ್ದು ರಾಜ್ಯದ ವಿದ್ಯಾರ್ಥಿ, ಯುವ ಉದ್ಯಮಿಗಳಿಗೆ ನೆರ ವಾಗಲಿದೆ. ಇಷ್ಟು ವರ್ಷ ಕೇಂದ್ರದ ಯೋಜನೆ ಯಾಕೆ ಪಡೆಯಲಿಲ್ಲ ಎಂದು ಪ್ರೆಶ್ನೆ ಮಾಡಿದರು.
ಇದೇ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಸಾಲ ಹಾಗೂ ಕಂತು ಮರುಪಾವತಿ ವ್ಯವಸ್ಥೆಗೆ ಸಚಿವರು ಚಾಲನೆ ನೀಡಿದರು. ನಿಗಮದ ಯೋಜನೆಗಳ ಬಗ್ಗೆ ಒನ್ ಟೈಮ್ ಸೆಟ್ಲ್ ಮೆಂಟ್, ಸಾಲ ವಸೂಲಾತಿಅಭಿಯಾನ ಬಗ್ಗೆ ವ್ಯಾಪಕ ಪ್ರಚಾರ ನೀಡಲು ನಿರ್ದೇಶನ ನೀಡಿದರು. ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ನಜೀರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
Web Stories