ಗದಗ: ಉಪ ತಹಶೀಲ್ದಾರ್ ದುರಾಡಳಿತ ವರ್ತನೆ ಕಂಡು ಸಚಿವ ಎಚ್‍ಕೆ ಪಾಟೀಲ್ ಅಧಿಕಾರಿ ಮೇಲೆ ಕೆಂಡಾಮಂಡಲರಾಗಿರುವ ಘಟನೆ ಬೆಟಗೇರಿನಲ್ಲಿ ನಡೆದಿದೆ.
ಸಾಮಾಜಿಕ ಭದ್ರತಾ ಯೋಜನೆ ಅರ್ಹರಿಗೆ ಲಾಭ ಒದಗಿಸುವಲ್ಲಿ ಉಪ ತಹಶೀಲ್ದಾರ್ ಐಜೆ ಪಾಪಣ್ಣವರ್ ವಿಫಲರಾಗಿದ್ದು, ಸಾರ್ವಜನಿಕರು ಯೋಜನೆ ಬಗ್ಗೆ ಕೇಳಲು ಬಂದಾಗ, ತಹಶಿಲ್ದಾರಗೆ ಅರ್ಜಿಕೊಡಿ ನಾನೇನು ಮಾಡಲಿ ಎಂದ ಉಪ ತಹಶೀಲ್ದಾರ್ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದು, ಇದನ್ನ ಕೇಳಿದ ಎಚ್‍ಕೆ ಪಾಟೀಲ್‍ರು ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಸುಳ್ಳು ಹೇಳಿದರೆ ಚೊನ್ನಾ ಬಿಚ್ಚುವೆ, ಬಡವರಿಗೆ ಸಹಾಯ ಮಾಡಬೇಕು ಅಂತಾ ಅನಿಸಲ್ವಾ ನಿನಗೆ ಎಂದು ಉಪ ತಹಶೀಲ್ದಾರ್‍ಗೆ ತರಾಟೆ ತೆಗೆದುಕೊಂಡಿದ್ದಾರೆ. ಬೆಟಗೇರಿ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಪರಿಹಾರ ನೀಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
Advertisement
ಕೆಲಸದಲ್ಲಿ ನಿರ್ಲಕ್ಷ್ಯ, ಸಾರ್ವಜನಿಕರಿಗೆ ಸ್ಪಂದಿಸದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರಿಯಾಗಿ ಕೆಲಸಮಾಡಬೇಕು. ತಹಶೀಲ್ದಾರ್ ಇರಲಿ, ಎಸಿ ಇರಲಿ ಸಹಾಯ ಅಂತ ಬಂದವರಿಗೆ ಸ್ಪಂದಿಸಬೇಕು. ಉಪ ತಹಶೀಲ್ದಾರ್ ಮೇಲೆ ನಿಗಾ ವಹಿಸುವಂತೆ ಎಸಿ ಮಂಜುನಾಥಗೆ ಸೂಚನೆ ನೀಡಿದ್ದೇನೆ ಎಂದು ಎಚ್‍ಕೆ ಪಾಟೀಲ್ ಹೇಳಿದ್ದಾರೆ.