ಬೆಂಗಳೂರು: ರಾಜ್ಯದಲ್ಲಿ ಬರಗಾಲವಿದ್ರೂ ಸಮ್ಮಿಶ್ರ ಸರ್ಕಾರದಲ್ಲಿ ಖರ್ಚಿಗೆ ಕಮ್ಮಿಯೇನಿಲ್ಲ. ವಿಧಾನಸೌಧದಲ್ಲಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಕೊಠಡಿಯ ನವೀಕರಣಕ್ಕೆ 70 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಪರಮೇಶ್ವರ್‍ಗೆ ಗೃಹ ಖಾತೆ ಹೋದಾಗ ದಲಿತರಿಗೆ ಅನ್ಯಾಯ ಎಂದು ರೇವಣ್ಣ ಹೇಳಿದ್ದರು. ಈಗ ಪರಮೇಶ್ವರ್ ಮೇಲಿನ ಪ್ರೀತಿಗೆ ರೇವಣ್ಣ ಅವರು ಇಲಾಖೆ ನಿಯಮವೇ ಬ್ರೇಕ್ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿ ಯಾರ ಕೆಲಸ ಆಗಿಲ್ಲ ಅಂದರೂ ಪರಮೇಶ್ವರ್ ಅವರ ಕೆಲಸ ಮಾತ್ರ ಮಿಸ್ ಆಗಲ್ಲ. ಹೀಗಾಗಿ ಪರಮೇಶ್ವರ್ ಕೊಠಡಿ ನವೀಕರಣಕ್ಕೆ ಸೂಪರ್ ಸಿಎಂ ಕೇಳಿದ್ದಷ್ಟು ಹಣ ಕೊಟ್ಟಿದ್ದಾರೆ.
Advertisement
Advertisement
ಹೌದು. ಬರಗಾಲದಲ್ಲೂ ಕೊಠಡಿ ನವೀಕರಣಕ್ಕೆ ಲಕ್ಷ ಲಕ್ಷ ಖರ್ಚು ಮಾಡಲಾಗಿದೆ. 70 ಜನ ರೈತರ ಸಾಲಮನ್ನಾ ಮಾಡಬಹುದಾದ ಹಣದಲ್ಲಿ ಒಂದೇ ರೂಂ ನವೀಕರಣ ಮಾಡಲಾಗಿದೆ. ಟೆಂಡರ್ ಕರೆಯದೇ ಬರೋಬ್ಬರಿ 70 ಲಕ್ಷದಲ್ಲಿ ಡಿಸಿಎಂ ಪರಮೇಶ್ವರ್ ಕೊಠಡಿಯನ್ನು ನವೀಕರಿಸಲಾಗಿದೆ. 4ಜಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿ ನಡೆಸಿದೆ.
Advertisement
4 ಜಿ ಕಾಯಿದೆಯ ಮೂಲಕ ಯಾವುದೇ ಟೆಂಡರ್ ಕರೆಯದೆ ಕೆಲಸ ಮಾಡಬಹುದು. 1, 2 ಲಕ್ಷ ಅಥವಾ 1 ಕೋಟಿಯದ್ದೇ ಆಗಿರಬಹುದು. ಒಟ್ಟಿನಲ್ಲಿ ತುರ್ತು ಸಮಯದಲ್ಲಿ ಮಾತ್ರ 4ಜಿ ಅನ್ವಯ ಕೆಲಸ ಮಾಡಬಹುದು. ಆದ್ರೆ ಇಲ್ಲಿ ಯಾವುದೇ ತುರ್ತು ಇಲ್ಲದೆ ಹೋದ್ರೂ 70 ಲಕ್ಷದಲ್ಲಿ ಡಿಸಿಎಂ ರೂಂ ನವೀಕರಣ ಮಾಡಲಾಗಿದೆ. ಇದೀಗ ನಿಯಮ ಬ್ರೇಕ್ ಮಾಡಿ ಕೆಲಸ ಮಾಡಿದ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಒಟ್ಟಿನಲ್ಲಿ ಇಲ್ಲಿ ಕೇವಲ ಇವರ ರಾಜಕೀಯ ಹಿತಾಸಕ್ತಿಗಳನ್ನು ತುಂಬಿಸಿಕೊಳ್ಳಲು ಈ ಕೆಲಸ ಆಗಿದೆ. ಆದ್ರೆ ಇಲ್ಲಿ ಒಂದೊಂದು ಲಕ್ಷ ಅಂದ್ರೂ ಸುಮಾರು 70 ಮಂದಿ ರೈತರ ಸಾಲಮನ್ನಾ ಮಾಡಬಹುದಾಗಿತ್ತು. ಪರಮೇಶ್ವರ್ ಬಂದ ಬಳಿಕ ಅದಕ್ಕೆ 70 ಲಕ್ಷ ರೂ ಖರ್ಚಿ ಮಾಡಿ ನವೀಕರಣ ಮಾಡಲಾಗಿದೆ. ಸೂಪರ್ ಸಿಎಂ ಎಂದೇ ಬಿಂಬಿತರಾಗಿರೋ ಎಚ್ ಡಿ ರೇವಣ್ಣ ಅವರು ಇಂತಹ ಸಂದರ್ಭಗಳಲ್ಲಿ ತಮಗೆ ಬೇಕಾದಂತೆ ನಿಯಮಗಳನ್ನು ಅವರು ಪರಮೇಶ್ವರ್ ಅವರ ಪ್ರೀತಿಗೆ ಈ ದುಂದುವೆಚ್ಚ ಮಾಡಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv